More

    ಕಟೀಲು ಜಾತ್ರೆ ಅರ್ಧಕ್ಕೆ ಮೊಟಕು

    ಕಟೀಲು: ಕೋವಿಡ್ ಎರಡನೆ ಅಲೆಯ ನಿರ್ಬಂಧದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಆಚರಣೆ ಅರ್ಧಕ್ಕೆ ಮೊಟಕುಗೊಂಡಿದೆ.

    ಈ ಬಾರಿ ನಿರ್ಬಂಧಗಳಿದ್ದರೂ ಸರಳವಾಗಿ ಆಚರಣೆಗೆ ಯೋಜಿಸಲಾಗಿತ್ತು. ಅದರಂತೆ ಜಾತ್ರೆ ಪ್ರಾರಂಭಗೊಂಡಿತ್ತು. ಆದರೆ ಜನರಿಗೆ ನಿರ್ಬಂಧಗಳನ್ನು ಹೇರಿದ್ದರೂ ಜನರು ಸ್ವಯಂ ಆಗಿ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುವುದು ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಆ‌ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರು ತಹಸೀಲ್ದಾರ್ ಮತ್ತಿತರ ಅಧಿಕಾರಿಗಳು ದೇವಳಕ್ಕೆ ತೆರಳಿ ಸರ್ಕಾರದ ಆದೇಶದ ಅನ್ವಯ ಜಾತ್ರೋತ್ಸವ ಆಚರಣೆ ರದ್ದು ಮಾಡುವಂತೆ ಸೂಚನೆ‌ ನೀಡಿದರು.

    ಸೋಮವಾರ ದೇವಳದ ಹಗಲು ರಥೋತ್ಸವ ಬೇಗನೆ ಮುಗಿಸಲಾಗಿತ್ತು. ಮಂಗಳವಾರ ಕಟೀಲು ಅಮ್ಮನವರ ಎಕ್ಕಾರು ಭೇಟಿ ಹಾಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಭೇಟಿ ರದ್ದಾಗಿದೆ.

    ಜಾತ್ರೆಯ ಉಳಿದ ಕಾರ್ಯಕ್ರಮಗಳನ್ನು ಪ್ರಾಂಗಣದ ಒಳಗೇ ಸರಳವಾಗಿ ನಡೆಸುವ ಸಾಧ್ಯತೆ ಇದೆ.

    ಕಟೀಲು ಜಾತ್ರೆ ಅರ್ಧಕ್ಕೆ ಮೊಟಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts