More

    9ರಿಂದ ಕಟೀಲು ಮೇಳ ತಿರುಗಾಟ

    ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಡುವ ಆರು ದಶಾವತಾರ ಮೇಳಗಳ ಈ ವರ್ಷದ ತಿರುಗಾಟ ಡಿ 9ರಂದು ಆರಂಭವಾಗಲಿದೆ. 5ರಂದು ದೀಪೋತ್ಸವ ನಡೆಯಲಿದ್ದು ಬಳಿಕ ಮೇಳಗಳ ತಿರುಗಾಟ ಆರಂಭವಾಗಲಿದೆ.

    ಈ ವರ್ಷ 30 ಕಲಾವಿದರು ಮೇಳ ಬಿಟ್ಟಿದ್ದಾರೆ. ಹತ್ತರಷ್ಟು ಮಂದಿ ವಿವಿಧ ಕಾರಣಗಳಿಂದ ತಿರುಗಾಟ ನಿಲ್ಲಿಸಿದ್ದು, 50 ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 170 ವೇಷಧಾರಿಗಳು, 57 ಹಿಮ್ಮೇಳ ಕಲಾವಿದರು, ಡ್ರೈವರ್, ಲೈಟಿಂಗ್ಸ್ ಸೇರಿದಂತೆ 24 ಮಂದಿ, 90 ಮಂದಿ ಇತರ ಸಹಾಯಕರು ಹೀಗೆ 330ರಿಂದ 340 ಮಂದಿ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಮೇಳದ ವೀಳ್ಯ ಈ ವರ್ಷ ಹೆಚ್ಚಿಸಿಲ್ಲ. ಕಾಯಂ ಸೇವಾದಾರರಿಗೆ 55 ಸಾವಿರ ರೂ.ಮತ್ತು ದೇವರ ಕಾಣಿಕೆ 5 ಸಾವಿರ ರೂ. ಇತರರಿಗೆ 60 ಸಾವಿರ ರೂ. ಮತ್ತು ದೇವರ ಕಾಣಿಕೆ 6 ಸಾವಿರ ರೂ.ಹಾಗೂ ದೇವಿ ಮಹಾತ್ಮೆ ಪ್ರಸಂಗಕ್ಕೆ 1500 ರೂ.ಹೆಚ್ಚಿನ ಮೊತ್ತ ಪಡೆಯಲಾಗುತ್ತದೆ. 380ರಿಂದ 400ರಷ್ಟು ಕಾಯಂ ಸೇವಾದಾರರು ಕಟೀಲು ಮೇಳಗಳ ಆಟ ಆಡಿಸುತ್ತಾರೆ. ಮೇ 25ಕ್ಕೆ ಪತ್ತನಾಜೆ ಸೇವೆಯಾಟ ನಡೆಯಲಿದ್ದು, 167 ದಿನಗಳ ಸೇವೆಯಾಟ ಇರಲಿದೆ. ಮೇಳ ಆರಂಭ ಹಾಗೂ ಕೊನೆಯ ದಿನದ ಸೇವೆಯಾಟ ಹೊರತುಪಡಿಸಿ ಆರೂ ಮೇಳಗಳಿಂದ 990 ಸೇವೆಯಾಟ ನಡೆಯಲಿವೆ. ಕಳೆದ ವರ್ಷ ಕರೊನಾದಿಂದ ಎರಡು ತಿಂಗಳ ಮುಂಚೆಯೇ ತಿರುಗಾಟ ನಿಂತಿದ್ದರೂ ಎಲ್ಲ ಕಲಾವಿದರಿಗೂ ಪೂರ್ತಿವೇತನ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts