More

    ಉತ್ತಮ ಕಾರ್ಯಕ್ಕೆ ದೇವತಾನುಗ್ರಹ

    ಕಟೀಲು: ಜೀವನದಲ್ಲಿ ವಿದ್ಯೆ, ವಿನಯ ಮುಖ್ಯ. ನಮ್ಮಲ್ಲಿನ ಅಹಂಕಾರ, ತಾಮಸ ಗುಣಗಳನ್ನು ವರ್ಜಿಸಬೇಕು. ನಾನೇ ನನ್ನಿಂದ ಎಂಬ ಅಹಂಕಾರ ಬೇಡ. ಮನುಷ್ಯನಲ್ಲಿನ ಉತ್ತಮ ಕೆಲಸಕ್ಕೆ ದೇವರ ಅನುಗ್ರಹವಿದೆ ಎಂದು ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಬ್ರಹ್ಮಕಲಶೋತ್ಸವ ಅಂಗವಾಗಿ ಭ್ರಾಮರಿ ಸಭಾಂಗಣದಲ್ಲಿ ಭಾನುವಾರ ಕೋಟಿ ಜಪ ಯಜ್ಞದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
    ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ‘ಉಡಲ್ದ ಉಳ್ಳಾಲ್ತಿ’ ವಿಷಯದ ಬಗ್ಗೆ ಉಪನ್ಯಾಸ ನೀಡಿ, ದುರ್ಗೆಯ ಶಕ್ತಿ ಅಪಾರವಾದುದು. ದೇವಿ ಶಕ್ತಿಯಿಂದ ಅನೇಕರು ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ. ಪ್ರಕೃತಿಯನ್ನು ಆರಾಧಿಸುವ ತುಳುನಾಡಿನಲ್ಲಿ ಮೂಲನಂಬಿಕೆ ಮುಖ್ಯವಾಗಿದೆ ಎಂದರು.
    ಮಡಂತ್ಯಾರು ರೌದ್ರನಾಥೇಶ್ವರ ದೇವಳ ಧರ್ಮದರ್ಶಿ ಎನ್.ರವಿ ಅಧ್ಯಕ್ಷತೆ ವಹಿಸಿದರು. ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

    ಕಟೀಲು ದೇವಳ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಬ್ಯಾಂಕ್ ಆಫ್ ಬರೋಡ ಮಂಗಳೂರು ಕಚೇರಿ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಎಂ.ಜೆ.ನಾಗರಾಜ, ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ, ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಪಿ.ವಿ.ಭಾರತಿ, ಉದ್ಯಮಿಗಳಾದ ಪೆರ್ಮುದೆ ಅಶೋಕ ಶೆಟ್ಟಿ, ಇನ್ನ ಕೆಳಗಿನ ಮನೆ ಪ್ರವೀಣ್ ಜಿ.ಶೆಟ್ಟಿ, ಪದ್ಮನೂರು ನೀಲೇಶ್ ಶೆಟ್ಟಿಗಾರ್, ಜಗದೀಶ ರೆಡ್ಡಿ, ಕಟೀಲು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ಉಡುಪಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೆರ, ನರರೋಗ ತಜ್ಞ ಡಾ.ವೆಂಕಟರಮಣ ಬೆಂಗಳೂರು, ಕೈಗಾರಿಕೋದ್ಯಮಿ ಬದ್ರೀನಾಥ್ ಕಾಮತ್, ಪಡುಬಿದ್ರಿ ಖಡ್ಗೇಶ್ವರಿ ದೇವಳ ಅಧ್ಯಕ್ಷ ವೈ.ಎನ್.ರಾಮಚಂದ್ರ ರಾವ್, ಮೊಗ್ರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ ಮುಗ್ರೋಡಿ ಉಪಸ್ಥಿತರಿದ್ದರು.
    ಕಟೀಲು ದೇವಳ ಆನುವಂಶಿಕ ಅರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು ಭಾಸ್ಕರದಾಸ್ ಎಕ್ಕಾರು ವಂದಿಸಿದರು. ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts