More

  ಧರ್ಮ ರಕ್ಷಣೆಯಿಂದ ದೇವಿ ಕೃಪೆ

  ಕಟೀಲು: ಮನುಷ್ಯ ಜನ್ಮ ಅಮೂಲ್ಯ, ಇದು ಮತ್ತೆ ಸಿಗುವುದಿಲ್ಲ. ಸಿಕ್ಕಿದರೂ ಭಾರತ ದೇಶದಲ್ಲಿ ಹಿಂದು ಧರ್ಮದಲ್ಲಿ ಸಿಗುತ್ತದೆಯೋ ಇಲ್ಲವೋ ಎಂಬ ಖಾತ್ರಿ ಇಲ್ಲ ಎಂದು ಗೋವಾ ಕೈವಲ್ಯ ಮಠದ ಗೌಡಪಾದಾಚಾರ್ಯ ಮಹಾಸಂಸ್ಥಾನದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಹೇಳಿದರು.
  ಕಟೀಲು ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಭ್ರಾಮರಿ ಸಭಾಂಗಣದಲ್ಲಿ ಶನಿವಾರ ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಪಶುವಿಗಿಂತ ಉನ್ನತ ಸ್ಥಾನದಲ್ಲಿರುವ ನಾವು ಧರ್ಮದ ರಕ್ಷಣೆ ಮತ್ತು ಸಂಸ್ಕೃತಿಯ ಅನುಷ್ಠಾನದ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.

  ಮಂಗಳೂರು ಕಾವೂರು ಶಾಖಾ ಮಠದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

  ಹಿಂದು ಧರ್ಮ ಮತವಲ್ಲ. ಅದು ಸಂಸ್ಕೃತಿ, ಸಂಸ್ಕಾರದ ಸಾರ. ಹಾಲು, ಬೀಜ ಮತ್ತಿತರ ವಸ್ತುಗಳಿಗೆ ಕೊಡುವ ಸಂಸ್ಕಾರ ನಮ್ಮ ಮಕ್ಕಳಿಗೆ ಕೊಡುವುದಿಲ್ಲ. ಆದ್ದರಿಂದ ಇಂದು ಮಕ್ಕಳು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಸ್ಥಿತಿ ಬಂದಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ವಸಂತ್‌ಕುಮಾರ್ ಬಿ.ವಿ. ‘ಧರ್ಮ ಸಂಸ್ಕಾರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
  ಮೂಲ್ಕಿ ಸೀಮೆ ಅರಸರು ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಸರ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.
  ಶಾಸಕ ಯು.ಟಿ.ಖಾದರ್, ಡಾ.ಅಭಿಲಾಷ್ ಪಿ.ವಿ, ಉಡುಪಿ-ಮಂಗಳೂರು ಕೆಐಎಡಿಬಿ ಜಂಟಿ ನಿರ್ದೇಶಕ ಕೆ.ಗೋಕುಲ್‌ದಾಸ್ ನಾಯಕ್, ಬಪ್ಪನಾಡು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಮತ್ತು ಆಡಳಿತ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ಪ್ರಮುಖರಾದ ಐ.ರಮಾನಂದ ಭಟ್, ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ, ಕಿನ್ನಿಗೋಳಿ ಆನಂದ ಡಿ.ಸಾಲ್ಯಾನ್, ಪ್ರದೀಪ್ ಕುಮಾರ್ ಕಲ್ಕೂರ, ಡಾ.ಪದ್ಮನಾಭ ಕಾಮತ್, ಮುಂಬೈ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಚ್ಚೂರು ಹರಿಭಟ್, ದೇವಳ ಆಡಳಿತ ಸಮಿತಿ ಅಧ್ಯಕ್ಷ ಮತ್ತು ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಸದಾನಂದ ಆಸ್ರಣ್ಣ, ಪ್ರ್ಮಾನಾಥ ಎಂ.ಶೆಟ್ಟಿ, ದೇವಿಪ್ರಸಾದ್ ಸಂಪಾಜೆ ಮತ್ತಿತರರು ಉಪಸ್ಥಿತರಿದ್ದರು.
  ಭಾಸ್ಕರ ದೇವಸ್ಯ ಸ್ವಾಗತಿಸಿದರು. ಮರೋಳಿ ಶ್ರೀ ಸೂರ‌್ಯನಾರಾಯಣ ದೇವಳ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗಿರಿಧರ ಶೆಟ್ಟಿ ವಂದಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts