More

    ಕಾಶ್ಮೀರಿ ಯುವಕರ ಪರ ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ ವಕೀಲರಿಗೆ ಸ್ಥಳೀಯ ವಕೀಲರಿಂದ ತೀವ್ರ ವಿರೋಧ

    ಧಾರವಾಡ: ಪಾಕ್​ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧಿತರಾಗಿರುವ ಕಾಶ್ಮೀರಿ ಯುವಕರ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ವಕೀಲರು ಹಿಂದಿರುಗಿದ್ದಾರೆ.

    ಪೊಲೀಸರ ಭದ್ರತೆಯಲ್ಲಿ ಜಿಲ್ಲಾ ಕೋರ್ಟ್​ಗೆ ಆಗಮಿಸಿದ ಕಾಶ್ಮೀರಿ ಯುವಕರ ಪರ ವಕೀಲರು ಕೋರ್ಟ್​ ಆಡಳಿತಾಧಿಕಾರಿಗೆ ಜಾಮೀನು ಅರ್ಜಿ ಸಲ್ಲಿಸದೆ ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸಲು ಮುಂದಾದರು. ಹೀಗಾಗಿ ನ್ಯಾಯಾಧೀಶರು ಅರ್ಜಿ ಸ್ವೀಕರಿಸಲು ನಿರಾಕರಿಸಿ. ಆಡಳಿತಾಧಿಕಾರಿಗೆ ಸಲ್ಲಿಸಿ ಎಂದು ಸೂಚಿಸಿದರು.

    ಜಾಮೀನು ಅರ್ಜಿ ಹಿಂದಕ್ಕೆ ಪಡೆದ ವಕೀಲರು ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸದೆ ಕೋರ್ಟ್​ನಿಂದ ಹೊರ ನಡೆದರು.

    ವಕೀಲರ ಕಾರು ಜಖಂ: ಕಾಶ್ಮೀರಿ ಯುವಕರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಬೇರೆ ಕಡೆಯಿಂದ ಬಂದ ವಕೀಲರನ್ನು ಸ್ಥಳೀಯ ವಕೀಲರು ತೀವ್ರವಾಗಿ ವಿರೋಧಿಸಿದರು. ಇದರಿಂದ ಕೋರ್ಟ್​ ಆವರಣದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಯಿತು. ಗುಂಪು ವಕೀಲರ ಕಾರು ಜಖಂಗೊಳಿಸಿತು. ಪೊಲೀಸರು ಮಧ್ಯ ಪ್ರವೇಶಿಸಿ ವಕೀಲರನ್ನು ಸುರಕ್ಷಿತವಾಗಿ ಕೋರ್ಟ್​ ಆವರಣದಿಂದ ಹೊರಕ್ಕೆ ಕಳುಹಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts