More

    ಕಾಶಿಲಿಂಗೇಶ್ವರ ಎತ್ತುಗಳು ಪ್ರಥಮ – ಹೇಮವೇಮ ಎತ್ತುಗಳಿಗೆ ಎರಡನೇ ಸ್ಥಾನ

    ಕಲಾದಗಿ: ಗಣೇಶೋತ್ಸವದ ನಿಮಿತ್ತ ಸಮೀಪದ ಚಿಕ್ಕಸಂಶಿಯಲ್ಲಿ ಇತ್ತೀಚೆಗೆ ನಡೆದ ತೆರಬಂಡಿ ಸ್ಪರ್ಧೆಯಲ್ಲಿ ಮೆಟಗುಡ್ಡದ ಶ್ರೀ ಕಾಶಿಲಿಂಗೇಶ್ವರ ಎತ್ತುಗಳು ಪ್ರಥಮ ಸ್ಥಾನ ಪಡೆಯುವ ಮೂಲಕ 50 ಸಾವಿರ ರೂ. ನಗದು ಹಾಗು ಟ್ರೋಫಿಯನ್ನು ತಮ್ಮ ಮಾಲೀಕನ ಮುಡಿಗೇರುವಂತೆ ಮಾಡಿದವು.

    ಕಮ್ಮನದಿನ್ನಿಯ ಹೇಮವೇಮ ಎತ್ತುಗಳು ಎರಡನೇ ಸ್ಥಾನ ಪಡೆದಿದ್ದು, ಅವುಗಳ ಮಾಲೀಕನಿಗೆ 40 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು.

    ತೃತೀಯ ಸ್ಥಾನ ಪಡೆದ ಒಂಟಗೋಡಿಯ ಹೇಮರೆಡ್ಡಿ ಮಲ್ಲಮ್ಮ ಎತ್ತುಗಳ ಮಾಲೀಕನಿಗೆ 30 ಸಾವಿರ ರೂ., ನಾಲ್ಕನೇ ಸ್ಥಾನ ಪಡೆದ ಕುನ್ನಾಳದ ಹಾದಿಬಸವೇಶ್ವರ ಎತ್ತುಗಳ ಮಾಲೀಕನಿಗೆ 25 ಸಾವಿರ ರೂ., 5ನೇ ಸ್ಥಾನ ಪಡೆದ ಕುನ್ನಾಳದ ಬಸವಲಿಂಗೇಶ್ವರ ಪ್ರಸನ್ನ ಎತ್ತುಗಳ ಮಾಲೀಕನಿಗೆ 20 ಸಾವಿರ ರೂ., 6ನೇ ಸ್ಥಾನ ಪಡೆದ ಮಹಾಲಿಂಗಪುರದ ಎತ್ತುಗಳ ಮಾಲೀಕ ಯಲ್ಲನಗೌಡ ಪಾಟೀಲ ಅವರಿಗೆ 17,501ರೂ, 7ನೇ ಸ್ಥಾನ ಪಡೆದ ಶಿರೋಳದ ಬಾರಿಗಿಡದ ಲಕ್ಕಮ್ಮದೇವಿ ಎತ್ತುಗಳ ಮಾಲೀಕನಿಗೆ 15,001 ರೂ., 8 ನೇ ಸ್ಥಾನ ಪಡೆದ ಶಿರೋಳದ ಸದಾಶಿವ ಪ್ರಸನ್ನ ಎತ್ತುಗಳು ಮಾಲೀಕನಿಗೆ 12,501 ರೂ. ಹಾಗೂ ಒಂಬತ್ತನೇ ಸ್ಥಾನ ಪಡೆದ ಯಾದವಾಡದ ಎತ್ತುಗಳ ಮಾಲೀಕ ಸಮರ್ಥ ಮಿರ್ಜಿ ಅವರಿಗೆ 10,001 ರೂ. ಬಹುಮಾನ ನೀಡಲಾಯಿತು.

    ಜಿಲ್ಲೆಯನ್ನೊಳಗೊಂಡಂತೆ ನೆರೆ ಜಿಲ್ಲೆಗಳಿಂದಲೂ ಆಗಮಿಸಿದ್ದ ಇಪ್ಪತ್ತಕ್ಕೂ ಅಧಿಕ ಜೋಡಿ ಎತ್ತುಗಳ ಮಾಲೀಕರು ತಮ್ಮ ಎತ್ತುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

    ಪ್ರಮುಖರಾದ ಕೆ.ಟಿ.ಪಾಟೀಲ, ನಿಂಗಪ್ಪ ಅರಕೇರಿ, ನಾರಾಯಣ ಹಾದಿಮನಿ, ತಿಮ್ಮಣ್ಣ ಸಾಲಾಪುರ, ಕೆ.ಎಚ್.ಕಷ್ಣಪ್ಪನವರ, ವಿಠಲ ನ್ಯಾಮಗೌಡ ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts