More

    ಮುಸ್ಲಿಮರ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರು

    ಕಲಾದಗಿ: ಭಾವೈಕ್ಯದ ಸಂಕೇತವಾಗಿರುವ ಗ್ರಾಮದ ಹಜರತ್ ನೂರ್ ಅಲಿಶಹಾ ಬಾಬಾ ಅವರ ದರ್ಗಾಕ್ಕೆ ಸಚಿವ ಜಮೀರ ಅಹ್ಮದ್ 20 ಲಕ್ಷ ರೂ.ಗಳ ಅನುದಾನ ನೀಡಿದ್ದು, ಜತೆಗೆ ಅಲ್ಪಸಂಖ್ಯಾತರಿಗಾಗಿ ಸಮುದಾಯಭವನ, ರಸ್ತೆಗಳ ನಿರ್ಮಾಣಕ್ಕೆ 5 ಕೋಟಿ ರೂ. ಕ್ಷೇತ್ರಕ್ಕೆ ಮಂಜೂರು ಮಾಡಿದ್ದಾರೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

    ಹಜರತ್ ನೂರ್ ಅಲಿ ಶಹಾ ಬಾಬಾ ಅವರ ಉರುಸು ನಿಮಿತ್ತ ಮಂಗಳವಾರ ಸಂಜೆ ನಡೆದ ಕವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಮುಸ್ಲಿಮರಿಗೆ ಗ್ರಾಮದಲ್ಲಿ 5 ಸುಮದಾಯ ಭವನಗಳಿಗೆ ಹಾಗೂ ಶೆಲ್ಲಿಕೇರಿ ಕ್ರಾಸ್‌ನಿಂದ ಶ್ರೀ ಗುರುಲಿಂಗೇಶ್ವರ ಮಠದವರೆಗಿನ ಸಿಸಿ ರಸ್ತೆಗಾಗಿ ಒಂದೂವರೆ ಕೋಟಿ ರೂ. ಮಂಜೂರು ಮಾಡಿರುವುದಾಗಿ ತಿಳಿಸಿದರು.

    ಹಿಂದಿನ ಸರ್ಕಾರದಲ್ಲಿನ ಶಾಸಕರು ಹಣ ಇಡದೆ ಗ್ರಾಮದ ಸಾಯಿಬಾಬಾ ಮಂದಿರದಿಂದ ಬಸ್ ನಿಲ್ದಾಣದವರೆಗಿನ ರಸ್ತೆ ಸೇರಿ ಇನ್ನಿತರ ಕಾಮಗಾರಿಗಳಿಗೂ ಭೂಮಿಪೂಜೆ ನೆರವೇರಿಸಿದ್ದು, ಅವುಗಳನ್ನು ಸಂಪೂರ್ಣಗೊಳಿಸಲು ಹಣ ಮಂಜೂರುಗೊಳಿಸಲಾಗಿದೆ ಎಂದರು.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿದರು. ಇಸ್ಲಾಂ ಧರ್ಮಗುರು ಯಾಜ್ ಅಹ್ಮದ್ ಖಾಜಿ, ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಅಂಜುಮನ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಸೋಲ್ಜರ್, ಮುಖಂಡರಾದ ಎಂ.ಬಿ. ಸೌದಾಗರ, ಹಸನ್ಮಹದ ರೋಣ, ಸಲೀಂ ಶೇಖ, ರಾಜಾಸಾಹೇಬ ಗೋಠೆ, ಜೆ.ಡಿ. ಚೌದರಿ, ನಿಂಗಪ್ಪ ಅರಕೇರಿ, ಬಸವರಾಜ ಸಂಶಿ, ಶ್ಯಾಮ ಕಾಳೆ ಇತರರಿದ್ದರು.

    ಸಚಿವ ತಿಮ್ಮಾಪುರಗೆ ಸನ್ಮಾನ: ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ದರ್ಗಾ ಕಮಿಟಿಯಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts