More

    ಕಾಶಿಯಾತ್ರೆಗೆ ಹೊರಟ ಭಕ್ತರು ಮಾರ್ಗ ಮಧ್ಯೆ ಚಳ್ಳಕೆರೆಗೆ

    ಚಳ್ಳಕೆರೆ: ಬೆಂಗಳೂರಿನ ಯಲಹಂಕದಿಂದ ಜು. 8 ರಿಂದ ಕಾಶಿಯಾತ್ರೆ ಆರಂಭಿಸಿರುವ 35 ಭಕ್ತರು, ಶುಕ್ರವಾರ ನಗರಕ್ಕೆ ಆಗಮಿಸಿದರು.

    ಈ ವೇಳೆ ಮಾತನಾಡಿದ ಭಕ್ತ ಉಮೇಶ್ ಆರಾಧ್ಯ, ಯಲಹಂಕದಿಂದ ಆರಂಭ ಮಾಡಿದ ಪಾದಯಾತ್ರೆ ದಾಬಸ್‌ಪೇಟೆ, ಮಧುಗಿರಿ, ರೊಳ್ಳ, ಹೇಮಾವತಿ, ಪರಶುರಾಂಪುರ ಮಾರ್ಗವಾಗಿ ಚಳ್ಳಕೆರೆಗೆ ಆಗಮಿಸಿದ್ದೇವೆ. ದಿನಕ್ಕೆ 35 ರಿಂದ 40 ಕಿಮೀ ದೂರ ಸಾಗಿ ವಿಶ್ರಾಂತಿ ಪಡೆದುಕೊಳ್ಳುತ್ತೇವೆ ಎಂದರು.

    2400 ಕಿಮೀ ದೂರ ಇರುವ ಕಾಶಿ ತಲುಪಲು 80 ದಿನಗಳ ಕಾಲ ದಾರಿ ಬದಿಯಲ್ಲಿ ಸಾಗಿ ಹೋಗುತ್ತೇವೆ. ಲೋಕ ಕಲ್ಯಾಣಕ್ಕಾಗಿ ಮತ್ತು ಆತ್ಮೋದ್ಧಾರಕ್ಕಾಗಿ ಪಾದಯಾತ್ರೆ ಮೂಲಕ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ವಾಡಿಕೆ ರೂಢಿಸಿಕೊಂಡಿದ್ದೇವೆ. ಇದೇ ರೀತಿ ಧರ್ಮಸ್ಥಳ ಮಲೆಮಹದೇಶ್ವರಬೆಟ್ಟ, ಮಂತ್ರಾಲಯ, ಶಬರಿಮಲೆ ಕ್ಷೇತ್ರಗಳ ದರ್ಶನ ಮಾಡಿದ್ದೇವೆ ಎಂದು ತಿಳಿಸಿದರು.

    ಪಾದಯಾತ್ರೆ ಮೂಲಕ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಇಚ್ಛೆ ಉಳ್ಳವರನ್ನು ನಾವು ಸ್ಥಾಪನೆ ಮಾಡಿಕೊಂಡಿರುವ ಶ್ರೀ ಕ್ಷೇತ್ರ ಕಾಶಿ ಪಾದಯಾತ್ರೆ ಸಮಿತಿಗೆ ಸದಸ್ಯರನ್ನಾಗಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

    ಮೌನಯಾತ್ರೆ: ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ರೇಖಾ ಎಂಬುವವರು ಮೌನ ವ್ರತಾಚರಣೆಯಲ್ಲಿ ಕಾಶಿ ತಲುಪಲಿದ್ದಾರೆ ಎಂದು ಸಹವರ್ತಿಗಳು ತಿಳಿಸಿದರು. ಊಟ, ಉಪಚಾರಕ್ಕೂ ಯಾರ ಸಂಗಡವೂ ಮಾತನಾಡದೆ ಯಾತ್ರೆಯಲ್ಲಿ ಸಾಗಲಿದ್ದಾರೆ ಎಂದು ಭಕ್ತೆ ಗೌರಮ್ಮ ಹೇಳಿದರು.

    ಪಾದಯಾತ್ರೆ ಮುಖಂಡ ಚಿಕ್ಕವೀರಪ್ಪ, ಕೆ.ಎನ್. ಕಲ್ಲೇಶ್, ವಿ.ರಘು, ಭಾಗ್ಯಮ್ಮ, ತಿಮ್ಮರಾಯಪ್ಪ, ವೆಂಕಟರಮಣಪ್ಪ, ಸೀತಾ ಸೋಮಶೇಖರ್, ಪುಣೆರಾವ್, ಎನ್. ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts