More

    ಕೆಎಎಸ್ ಹುದ್ದೆಗಳ ಸಂದರ್ಶನ ರದ್ದು ಕರಡು ಅಧಿಸೂಚನೆ ಪ್ರಕಟ

    ಬೆಂಗಳೂರು: ಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ನಿಯಮದಡಿ ನಡೆಸುವ ಗ್ರೂಪ್ ‘ಎ’ ಮತ್ತು ‘ಬಿ’ ಶ್ರೇಣಿ ಹುದ್ದೆಗಳ ನೇಮಕ ಸಂದರ್ಭದಲ್ಲಿ ಸಂದರ್ಶನದಿಂದ ವಿನಾಯಿತಿ ನೀಡುವ ಸಂಬಂಧ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಈ ಸಂಬಂಧ ಸರ್ಕಾರ ಜ.22 ರಂದು ರಾಜ್ಯಪತ್ರ ಹೊರಡಿಸಿದ್ದು, 15 ದಿನಗಳ ಒಳಗೆ ಆಕ್ಷೇಪಣೆಗಳನ್ನು ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಸಲ್ಲಿಸಬಹುದು.

    ನಿಯಮ ಸಡಿಲಿಕೆ ಉದ್ದೇಶ: ನೇಮಕಾತಿಯಲ್ಲಿ ಪಾರದರ್ಶಕತೆ ಹಾಗೂ ವೇಗ ಹೆಚ್ಚುಸುವ ಉದ್ದೇಶದಿಂದ ನಿಯಮ ಸಡಿಲಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡಿತ್ತು. ಕೆಪಿಎಸ್ಸಿ ಮೂಲಕ ಹುದ್ದೆಗಳ ಭರ್ತಿ ಎಂದಾಕ್ಷಣ ವಿಳಂಬ, ವಿವಾದ, ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ ಎಂಬ ಆರೋಪ ಸರ್ವೆ ಸಾಮಾನ್ಯವಾಗಿತ್ತು. ಅನೇಕ ಸಂದರ್ಭಗಳಲ್ಲಿ ಸಂದರ್ಶನಗಳು ಒಂದು, ಒಂದೂವರೆ ವರ್ಷ ತೆಗೆದುಕೊಂಡ ಉದಾಹರಣೆಗಳಿವೆ. ಅದರಲ್ಲೂ ವೈದ್ಯರು, ಇಂಜಿನಿಯರ್​ಗಳ ಹುದ್ದೆ ಭರ್ತಿ ವಿಳಂಬ ರಾಜ್ಯ ಸರ್ಕಾರಕ್ಕೆ ತಲೆಬಿಸಿ ತಂದೊಡ್ಡಿತ್ತು. ತಾಲೂಕು ಕೇಂದ್ರ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನಿವಾರಣೆ ಹಾಗೂ ನೀರಾವರಿ, ಲೋಕೋಪಯೋಗಿ ಇನ್ನಿತರ ಇಲಾಖೆ ಯೋಜನೆಗಳ ಸಕಾಲಕ್ಕೆ ಅನುಷ್ಠಾನಕ್ಕೂ ಅಡಚಣೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts