More

    ಕರೂರು ಗ್ರಾಮದಲ್ಲಿ ದೇವರುಗಳ ಪಟ್ಟಾಭಿಷೇಕ

    ಸಿರಿಗೇರಿ: ಕರೂರು ಗ್ರಾಮದಲ್ಲಿ ಹಾಲುಮತದ ಆರಾಧ್ಯ ದೈವ ಸಂತೆಪೇಟೆಯ ಶ್ರೀ ಕಣೇಕಲ್ಲೇಶ್ವರ ಸ್ವಾಮಿ ಮತ್ತು 9 ಭಂಡಾರದ ದೇವರುಗಳ ಪಟ್ಟಾಭಿಷೇಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

    ಕರೂರು ಗ್ರಾಮದ ಬೀರಪ್ಪ ದೇವರು, ಕರೂರಪ್ಪ, ಕೊಂಚಿಗೇರಿ ಗ್ರಾಮದ ಕೊಂಚಿಗೇರಪ್ಪ, ಬಲಕುಂದಿ ಗ್ರಾಮದ ಪಲ್ಲಕ್ಕಿ ರಾಮದೇವರು, ಹಾಗಲೂರಿನ ಹಾಗಲೂರಪ್ಪ, ಮುದ್ದಟಮಗಿ ಗ್ರಾಮದ ನೆಣೆಕಪ್ಪ, ಸಿರಿವಾರ ಗ್ರಾಮದ ಮಲ್ಲೇಶ್ವರ, ಚಿಟಿಗಿನಾಳ್ ಗ್ರಾಮದ ಬೀರಲಿಂಗೇಶ್ವರ, ಮುದ್ದಟ್ಟನೂರು ಗ್ರಾಮದ ವೀರಲಿಂಗೇಶ್ವರ ದೇವರಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

    ನಂತರ ಸಂತೆಪೇಟೆಯ ದೇವಸ್ಥಾನದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಹಾಲುಮತ ಸಮುದಾಯದವರು ಪಟ್ಟ ಏರುವ ಕಾರ್ಯ ಹಾಗೂ ನೂತನ ವಸ್ತ್ರ ಧರಿಸುವ ಕಾರ್ಯಕ್ರಮ ಜರುಗಿತು. ಶನಿವಾರ ಮತ್ತು ಭಾನುವಾರ ಭಕ್ತರಿಗೆ ಅನ್ನ ಸಂತರ್ಪಣ ವ್ಯವಸ್ಥೆ ಮಾಡಲಾಗಿತ್ತು.

    ರೆಡ್ಡಿಪೇಟೆಯ ಭೀಮ ಪೂಜಾರಿ ನೇತೃತ್ವದಲ್ಲಿ ಲಕ್ಷ್ಮೀ ನಾರಾಯಣ ದೇವಸ್ಥಾನದ ಗಂಗೆ ಸ್ನಾನದಲ್ಲಿ ಉರಿಬತ್ತಿ ನುಂಗುವುದು, ಖಡ್ಗಗಳನ್ನು ಬಡಿದು ಕೊಳ್ಳುವುದು, ಚಾಕನ್ನು ಎದೆಗೆ ಚುಚ್ಚುಕೊಳ್ಳುವುದು, ಮುಳ್ಳಿನ ಪಾದ ಏರುವುದು, ಇತರ ವಿಶೇಷ ಪವಾಡಗಳನ್ನು ನಡೆಸಿಕೊಟ್ಟರು. ಹಾಲುಮತದ ಪ್ರಮುಖರಾದ ಕಣೇಕಲ್ಲಪ್ಪ, ಕರಿವಟ್ಟಿ ರಂಗಣ್ಣ, ಜಂಬೆಗಿಡದ ಕೆಂಚಯ್ಯ, ಎನ್ನಮ್ಮನವರ ದ್ಯಾವಣ್ಣ, ಎಮ್ಮಿಗನೂರು ಪಂಪಣ್ಣ, ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts