More

    ಶಾಸಕ ದಢೇಸುಗೂರು ಬಂಧನ ಮಾಡಿ: ಕಾರಟಗಿಯಲ್ಲಿ ಬ್ಲಾಕ್ ಕಾಂಗ್ರೆಸ್, ಎನ್‌ಎಸ್‌ಯುಐ ಪ್ರತಿಭಟನೆ

    ಕಾರಟಗಿ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಶಾಸಕ ಬಸವರಾಜ ದಢೇಸುಗೂರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿ ಕಾರಟಗಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ, ಎನ್‌ಎಸ್‌ಯುಐಯಿಂದ ಸೋಮವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮದ ನಿವಾಸಿ, ನಿವೃತ್ತ ಮುಖ್ಯಪೇದೆ ಪರಸಪ್ಪ ಎಂಬುವರು ಮಗನಿಗೆ ಪಿಎಸ್‌ಐ ಉದ್ಯೋಗ ಕೊಡಿಸಲು ಶಾಸಕ ಬಸವರಾಜ ದಢೇಸುಗೂರು ಜತೆ 30ಲಕ್ಷ ರೂ.ಗೆ ಡೀಲ್ ಕುದುರಿಸಿದ್ದು 15 ಲಕ್ಷ ರೂ. ಮುಂಗಡವಾಗಿ ನೀಡಿದ್ದಾರೆ. ಕೆಲಸ ಆಗದಿದ್ದಾಗ ಹಣ ವಾಪಸ್ ನೀಡುವಂತೆ ಪರಸಪ್ಪ ಕೇಳಿದ್ದಾರೆ. ಆದರೆ, ಶಾಸಕರು ‘ಈ ಹಣವನ್ನು ಸರ್ಕಾರಕ್ಕೆ ನೀಡಿದ್ದೇನೆ’ ಎಂದು ಹೇಳಿದ್ದಲ್ಲದೆ ಪರಸಪ್ಪಗೆೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಕಷ್ಟಪಟ್ಟು ಓದಿ ಹುದ್ದೆ ಪಡೆಯುವ ಬಡಮಕ್ಕಳ ಭವಿಷ್ಯದ ಕನಸಿಗೆ ಬಿಜೆಪಿ ಸರ್ಕಾರ ತಣ್ಣೀರು ಎರಚಿದೆ. ಶಾಸಕ ದಢೇಸುಗೂರು ಸೇರಿ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಎಲ್ಲರನ್ನೂ ಬಂಧಿಸಬೇಕು. ಇಲ್ಲವಾದಲ್ಲಿ ಕ್ಷೇತ್ರಾದ್ಯಂತ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಂ.ಬಸವರಾಜಗೆ ಸಲ್ಲಿಸಿದರು.

    ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಬಸವರಾಜ ಬೂದಿ, ಮಂಜುನಾಥ ಮೇಗೂರು, ಸೌಮ್ಯಾ ಕಂದಗಲ್, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ ಭಾವಿ, ಪ್ರಮುಖರಾದ ನಾಗರಾಜ ತಂಗಡಗಿ, ಶಶಾಂಕ ತಂಗಡಗಿ, ಶಿವಮೂರ್ತಿ ಬರ್ಸಿ, ಶರಣಪ್ಪ ಕಾಯಿಗಡ್ಡಿ, ಉದಯ್ ಈಡಿಗೇರ್, ಮಹೇಶ ಕಂದಗಲ್, ಅಯ್ಯಪ್ಪ ಉಪ್ಪಾರ್, ವೀರೇಶ ಶೆಟ್ಟರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts