More

    ರಜಪೂತ ಕರ್ಣಿ ಸೇನೆ ಮುಖಂಡನ ಹತ್ಯೆ: ಶೂಟರ್‌ಗಳನ್ನು ಗುರ್ತಿಸಿದ ಪೊಲೀಸರು – ಇವರು ಬಾಡಿಗೆ ಹಂತಕರೇ?

    ಜೈಪುರ: ರಾಷ್ಟ್ರೀಯ ರಜಪೂತ ಕರ್ಣಿ ಸೇನೆ(ಫ್ರಿಂಜ್ ಗ್ರೂಪ್‌)ಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯನ್ನು ಕೊಂದ ಇಬ್ಬರು ಶೂಟರ್‌ಗಳನ್ನು ರಾಜಸ್ಥಾನ ಪೊಲೀಸರು ಗುರುತಿಸಿದ್ದಾರೆ. ಆರೋಪಿಗಳು ಮಂಗಳವಾರ ಜೈಪುರದ ಮನೆಯಲ್ಲಿ ಚಹಾ ಸೇವಿಸಿದ ನಂತರ ಗೊಗಮೆಡಿಯನ್ನು ಪಾಯಿಂಟ್-ಬ್ಲಾಂಗ್ ರೇಂಜ್​ನಿಂದ ಹಲವು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

    ಇದನ್ನೂ ಓದಿ: ದೆಹಲಿಯಲ್ಲಿ ಚಳಿಗಾಲದ ರಜೆ ಆರೇ ದಿನ- ಸರ್ಕಾರದ ಆದೇಶ ಏಕೆ ಗೊತ್ತಾ?
    ಪರಾರಿಯಾಗಿರುವ ಇಬ್ಬರು ಆರೋಪಿಗಳನ್ನು ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಎಂದು ಗುರುತಿಸಲಾಗಿದ್ದು, ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರು ಬಾಡಿಗೆ ಹಂತಕರು ಆಗಿರಬಹುದು ಮತ್ತು ಇವರ ಬಂಧನ ನಂತರ ಹಲವು ವಿಚಾರಗಳು ತಿಳಿದುಬರಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಗೊಗಮೆಡಿ ಹೆಸರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಕೇಳಿ ಬಂದಿತ್ತು. ಆತನ ಹತ್ಯೆಯು ಗ್ಯಾಂಗ್ ಗಳ ನಡುವಿನ ಪೈಪೋಟಿಯ ಪರಿಣಾಮವಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಶೂಟರ್‌ಗಳ ಪತ್ತೆಗೆ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರು ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಅವರ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಗೆ ತಲಾ 5 ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ.

    ಗೊಗಮೆಡಿ ಹತ್ಯೆ ನಂತರ ಅವರ ಬೆಂಬಲಿಗರು ಬುಧವಾರ ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದರು. ರಾಜ್ಯದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಅವರ ಬೆಂಬಲಿಗರು ಆಸ್ಪತ್ರೆಯ ಹೊರಭಾಗದಲ್ಲಿ ಶಿಪ್ರಾ ಪಥ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜೈಪುರ ಅಲ್ಲದೆ, ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ.

    ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಗೋಡಾರಾ ಈ ಹಿಂದೆ ಗೊಗಮೆಡಿಗೆ ಬೆದರಿಕೆ ಹಾಕಿದ್ದ. ಇವನ ವಿರುದ್ಧ ದೂರು ದಾಖಲಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ನಂಬಲಾದ ಗೋಡಾರಾ, ಕಳೆದ ವರ್ಷ ರಾಜಸ್ಥಾನದ ಸಿಕಾರ್‌ನಲ್ಲಿ ನಾಲ್ವರು ವ್ಯಕ್ತಿಗಳನ್ನು ಗುಂಡಿಕ್ಕಿ ಕೊಂದಿದ್ದ ದರೋಡೆಕೋರ ರಾಜು ಥೇತ್‌ನ ಹತ್ಯೆಯ ಶಂಕಿತನೂ ಆಗಿದ್ದಾನೆ.

    ದಾಳಿಯಲ್ಲಿ ಗೊಗಮೆಡಿ ಮತ್ತು ಅವರ ಇಬ್ಬರು ಸಹಚರರಿಗೆ ಗುಂಡಿನ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗೊಗಮೆಡಿ ಅವರ ಸಹಾಯಕರು ದಾಳಿಕೋರರಲ್ಲಿ ಒಬ್ಬನನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ರೈತರ ಆತ್ಮಹತ್ಯೆಗೆ ಸ್ಪಂದಿಸದ ಸರಕಾರಕ್ಕೆ ಮುಸ್ಲಿಮರ ಓಲೈಕೆ ಮುಖ್ಯವಾಗಿದೆ: ಆರ್.ಅಶೋಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts