More

    32 ವರ್ಷದವರೂ ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ನೇಮಕಾತಿಗೆ ವಯೋಮಿತಿ ಹೆಚ್ಚಳ

    ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಸಬ್ ಇನ್​ಸ್ಪೆಕ್ಟರ್ (ಸಿವಿಲ್) ಹುದ್ದೆಯ ನೇರ ನೇಮಕಾತಿಯಲ್ಲಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಲಾಗಿದೆ.
    ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) (ಪುರುಷ ಹಾಗೂ ಮಹಿಳೆ) ಹುದ್ದೆಗೆ ನಿಗದಿಪಡಿಸಿರುವ ವಯೋಮಿತಿಯನ್ನು 2 ವರ್ಷ ಹೆಚ್ಚಿಸಿದ್ದು, ಪ್ರಸ್ತುತ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ- 30, ಎಸ್​ಸಿ, ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
    ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿರುವ 125 ಹುದ್ದೆಗಳು ಸೇರಿ ಒಟ್ಟು 556 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿಂಗಡಣೆ ಇಂತಿದೆ.

    ಇದನ್ನೂ ಓದಿ:  ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಎಂದ ಕೇಂದ್ರ

    ಪುರುಷ- 278 , ಮಹಿಳೆ– 91, ಸೇವೆಯಲ್ಲಿರುವ (ಪುರುಷ) – 46, ಸೇವೆಯಲ್ಲಿರುವ ಮಹಿಳೆಯರಿಗೆ 16 ಹುದ್ದೆಗಳನ್ನು ಮೀಸಲಿಡಲಾಗಿದೆ.
    ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ / ತತ್ಸಮಾನ ಶಿಕ್ಷಣ ಪೂರೈಸಿರಬೇಕು. ಸೇವಾ ನಿರತರು ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷ ಕನಿಷ್ಠ ಸೇವೆಯನ್ನು ಪೂರ್ಣಗೊಳಿಸಿರಬೇಕು.
    ವೇತನಶ್ರೇಣಿ: 37,900 ರೂ. ದಿಂದ 70,850 ರೂ. ಇರುತ್ತದೆ.

    ಇದನ್ನೂ ಓದಿ: ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ

    ನೇಮಕಾತಿ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇರುತ್ತದೆ. ಈ ಹಿಂದೆ 10 ಅಂಕಗಳಿಗೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ಈ ಸಲ ರದ್ದುಪಡಿಸಲಾಗಿದೆ.
    ಜೂನ್ 1 ರಿಂದ ಜೂನ್ 30ರ ಸಂಜೆ 6 ಗಂಟೆ ವರೆಗೆ www.ksp.gov.in ನಲ್ಲಿ ಆನ್​ಲೈನ್ ಅರ್ಜಿ ಸಲ್ಲಿಸಬಹುದು. ಜುಲೈ 2ರ ವರೆಗೆ ಶುಲ್ಕ ಪಾವತಿಸಬಹುದು.

    ಬಳಕೆದಾರರ ಸುರಕ್ಷತೆಗೆ ಫೇಸ್‌ಬುಕ್​ ತಂದಿದೆ ಹೊಸ ಫೀಚರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts