More

    ಮಾರ್ಚ್​ 5ರಂದು ರಾಜ್ಯ ಸರ್ಕಾರದ ಆಯವ್ಯಯ ಮಂಡನೆ; ಯಡಿಯೂರಪ್ಪ ಬಜೆಟ್​ನಲ್ಲಿ ಮಕ್ಕಳಿಗೆ ಬಂಪರ್!

    ಬೆಂಗಳೂರು: 2008ರಲ್ಲಿ ಪ್ರತ್ಯೇಕ ಕೃಷಿಗಾಗಿ ಬಜೆಟ್ ಮಂಡನೆ ಮಾಡಿ ಚರಿತ್ರೆ ಸೃಷ್ಟಿ ಮಾಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿ ಇನ್ನೊಂದು ವಿಶೇಷ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ.

    ಮಕ್ಕಳ ಭವಿಷ್ಯ ದೃಷ್ಟಿಯಿಂದ ಪ್ರತ್ಯೇಕ ಬಜೆಟ್ ಮಂಡನೆಗೆ ಸಿದ್ಧವಾಗಿರುವ ಮುಖ್ಯಮಂತ್ರಿ. ಈ ಬಾರಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡನೆಗೆ ತೀರ್ಮಾನ ಮಾಡಲಾಗಿದೆ. ಮಕ್ಕಳ ಬಜೆಟ್​ನಲ್ಲಿ ಮಕ್ಕಳ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮ, ಹಂಚಿಕೆ ಮಾಡುವ ಅನುದಾನ, ವೆಚ್ಚ ವಿಶ್ಲೇಷಿಸುವುದು ಸರ್ಕಾರದ ಉದ್ದೇಶ ಎಂಬ ಮಾಹಿತಿ ತಿಳಿದು ಬಂದಿದೆ.

    ಎಲ್ಲ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳ‌ ವಿವರ, ಅನುದಾನ‌ ಹಂಚಿಕೆ, ಖರ್ಚು, ಕಾರ್ಯನೀತಿಯನ್ನು ವಿವರಿಸಬೇಕು ಎಂದು ಸೂಚನೆ ನೀಡಲಾಗಿದೆ.

    ಆಯವ್ಯಯದಲ್ಲಿ ಅಳವಡಿಸಬೇಕಾದ ಕಾರ್ಯಕ್ರಮ, ವರ್ಗೀಕರಣ ಮಾಡಿ‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುವಂತೆ ಆರ್ಥಿಕ ಇಲಾಖೆ‌ ಈಗಾಗಲೇ ಕೋರಿದೆ.

    ಮಕ್ಕಳ ಅಪೌಷ್ಟಿಕತೆ, ನವಜಾತ ಶಿಶುಗಳ ಮರಣ, ಹೆಣ್ಣು ಶಿಶು ಹತ್ಯೆ, ಗರ್ಭಪಾತ, ಮಕ್ಕಳನ್ನು‌ ಶಾಲೆಗೆ ಕಳುಹಿಸದಿರುವುದು, ಬಾಲ್ಯ ವಿವಾಹ, ಶಾಲೆಯಿಂದ ದೂರ ಉಳಿಯದಂತೆ ತಡೆಯುವುದು, ಹೆಣ್ಣು ಮಕ್ಕಳಿಗೆ ಉತ್ತಮ‌ ಆರೋಗ್ಯ ಶಿಕ್ಷಣ, ತರಬೇತಿ ಮೂಲಕ‌ ಸಬಲೀಕರಣಕ್ಕೆ ಒತ್ತು‌ ನೀಡುವುದು ಮಕ್ಕಳ ಬಜೆಟ್​ನ ಆದ್ಯತೆಯಾಗಿದೆ.

    ಇಲಾಖಾವಾರು ಸಭೆಯಲ್ಲಿ ಮಕ್ಕಳ ಬಜೆಟ್​ ಬಗ್ಗೆ ಸಿಎಂ ಯಡಿಯೂರಪ್ಪ ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸೂಚನೆ ಬೆನ್ನಲ್ಲೇ ತಯಾರಿ ನಡೆಸಿರುವ ಆರ್ಥಿಕ ಇಲಾಖೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts