More

    ಬಜೆಟ್​ನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸಿಕ್ಕ ಅನುದಾನ ಹೀಗಿದೆ

    ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಘೋಷಿಸಿದ ರಾಜ್ಯ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಕೋಟ್ಯಂತರ ರೂಪಾಯಿ ಅನುದಾನ ಸಿಕ್ಕಿದೆ. ಸರ್ಕಾರಿ ಶಾಲೆಗಳ ಮತ್ತು ಬಡಮಕ್ಕಳ ಶಿಕ್ಷಣದ ಉತ್ತೇಜನದ ನಿಟ್ಟಿನಲ್ಲಿ ಪ್ರಮುಖ ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದಾರೆ.

    • ಆಯ್ದ 50 ಕರ್ನಾಟಕ ಪಬ್ಲಿಕ್ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ
    • 100 ಕರ್ನಾಟಕ ಪಬ್ಲಿಕ್​ ಸ್ಕೂಲ್​ಗಳ 14 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ
    • 2 ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಶಾಲಾ ಶೌಚಗೃಹಗಳ ಉನ್ನತೀಕರಣ ಮತ್ತು ನೀರಿನ ಸೌಲಭ್ಯ. ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ನಿರ್ವಹಣೆ, ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ಅನುದಾನ
    • ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಕರ್ಯಕ್ಕೆ 150 ಕೋಟಿ ರೂಪಾಯಿ, ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಮತ್ತು ಕಲಿಕಾ ಸಾಮಗ್ರಿ ಒದಗಿಸಲು 50 ಕೋಟಿ ರೂ. ಅನುದಾನ
    • ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ವಿಸ್ತರಣೆ
    • ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕಲಿತ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ
    • ಡಿಜಿಟಲ್ ಕಲಿಕೆಗೆ ಅನುವಾಗುವಂತೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್​ಗಳ ಅಭಿವೃದ್ಧಿ.
    • ಕೇಂದ್ರ ಮತ್ತು ರಾಜ್ಯ ಆಡಳಿತ ಸೇವೆಗಗಳು, ಬ್ಯಾಂಕಿಂಗ್, ರೈಲೆ ಇತ್ಯಾದಿ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರ ಸೇರ್ಪಡೆ ಉತ್ತೇಜಿಸಲು “ಸಾಮರ್ಥ್ಯ-ಸಾರಥ್ಯ” ಕಾರ್ಯಕ್ರಮ; 5 ಲಕ್ಷ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 5 ಕೋಟಿ ಅನುದಾನ.
    • ಜಾಗತಿಕಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶೈಕ್ಷಣಿಕ ನಾಯಕತ್ವ ಜಾರಿ
    • ರಾಜ್ಯದ ಆಯ್ದ ಮಹಾನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂಭ
    • ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಅರಿವು ಮೂಡಿಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಾರ್ಯಾಗಾರ

    ರಾಜ್ಯ ಬಜೆಟ್​: ಇವುಗಳಿಗೆ ಕೋಟಿ ಕೋಟಿ ಹಣ ಮೀಸಲಿಟ್ಟ ಸಿಎಂ

    ಮಹಿಳೆಯರಿಗೆ ರಾಜ್ಯ ಬಜೆಟ್​ನಲ್ಲಿ ಸಿಕ್ಕಿದ್ದೇನು?

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts