More

    ಲೋಕಸೇವಾ ಆಯೋಗ ಸುಧಾರಣೆ: ಸಿಎಂ ಮಧ್ಯ ಪ್ರವೇಶಕ್ಕೆ ಸುರೇಶ್ ಕುಮಾರ್ ಆಗ್ರಹ

    ಬೆಂಗಳೂರು: ಲೋಕಸೇವಾ ಆಯೋಗದ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಆಯೋಗದ ಅಧ್ಯಕ್ಷರಿಗೆ ಮತ್ತು ಸದಸ್ಯರುಗಳಿಗೆ ತಿಳುವಳಿಕೆ ನೀಡುವಂತೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

    ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವೈಖರಿಯಿಂದ ಸಹಸ್ರಾರು ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಬೇಸತ್ತಿದ್ದಾರೆ. ಆಯೋಗದ ಒಟ್ಟು ನಡವಳಿಕೆಯಿಂದ ತಮಗೆ ಭವಿಷ್ಯವೇ ಇಲ್ಲವೇನೋ ಎಂಬ ಹತಾಶ ಭಾವನೆಗೆ ತಲುಪುತ್ತಿದ್ದಾರೆ.

    ಇದೀಗ ಲೋಕಸೇವಾ ಆಯೋಗದ ಮತ್ತೋರ್ವ ಕಾರ್ಯದರ್ಶಿ ಮತ್ತು ಆಯೋಗದ ಸದಸ್ಯರ ನಡುವೆ ಯಥಾ ಪ್ರಕಾರ ಸಂಘರ್ಷ ಪ್ರಾರಂಭವಾಗಿದೆ. ಈ ಕುರಿತು ನಾನು ನಿರಂತರವಾಗಿ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಇವರಿಬ್ಬರ ನಡುವಿನ ಜಗಳದಲ್ಲಿ ಉದ್ಯೋಗ ಆಕಾಂಕ್ಷಿ ಯುವಕ ಯುವತಿಯರು ಬಡವಾಗುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.

    ಲೋಕ ಸೇವಾ ಆಯೋಗದ ವಿಳಂಬ ಪ್ರವೃತ್ತಿ ವಿರುದ್ಧ ಲೋಕಸೇವಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡ ಶಾಂತಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಕಳಿಸಿರುವುದು ಅತ್ಯಂತ ನಿರ್ದಯಿ ಕ್ರಮ. ಏಕಾಂಗಿಯಾಗಿ ಉದ್ಯೋಗ ಆಕಾಂಕ್ಷಿಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ದರದರನೆ ಎಳೆದುಕೊಂಡು ಹೋದ ದೃಶ್ಯ ಅತ್ಯಂತ ಅಸಮರ್ಥನೀಯ. ಅದರಲ್ಲೂ ಅವರ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಎ್.ಐ.ಆರ್ ದಾಖಲಿಸಿರುವ ಪೊಲೀಸರ ಕ್ರಮ ಖಂಡನೀಯ ಎಂದಿದ್ದಾರೆ.

    ಕರ್ನಾಟಕ ಸೇವಾ ಆಯೋಗ, ಕೇವಲ ತಕರಾರು ಮಾಡುವ ಜಾಯಮಾನ ತೊರೆದು ಒಂದು ಕಾಲಮಿತಿಯಲ್ಲಿ ಕೆಲಸ ಮಾಡಿ ಯಶಸ್ವಿ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡುವ ಕಾರ್ಯ ಮಾಡುತ್ತಿದ್ದರೆ ಈ ಯುವಕ ಪ್ರತಿಭಟನೆ ಮಾಡುವ ಅವಶ್ಯಕತೆಯೇ ಇರಲಿಲ್ಲ. ಆದರೆ ಈ ಯುವಕರ ಕೂಗು ಆಯೋಗದ ಕಚೇರಿಯಿಂದ ಅನತಿ ದೂರದಲ್ಲೇ ಇರುವ ವಿಧಾನಸೌಧಕ್ಕೆ ಮುಟ್ಟದಿರುವುದು ಛೇದಕರ. ಇನ್ನಷ್ಟು ಪ್ರತಿಭಟನೆಗಳು ಆಗದಂತೆ ತಡೆಯಲು ಈ ಯುವ ಆಕಾಂಕ್ಷಿಗಳು ಸಿನಿಕರಾಗದಂತೆ ಎಚ್ಚರ ವಹಿಸಲು ಕ್ರಮ ಅಗತ್ಯವಿದೆ ಎಂದು ಸುರೇಶ್‌ಕುಮಾರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts