More

    ಗಣೇಶೋತ್ಸವ ಭದ್ರತೆಗೆ ಪ್ರಶಿಕ್ಷಣಾಥಿ೯ಗಳು; ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ​ ಪ್ಲ್ಯಾನ್

    ಕೇಶವಮೂತಿ೯ ವಿ.ಬಿ ಹುಬ್ಬಳ್ಳಿ
    ಕರೊನಾ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಎರಡು ವರ್ಷ ಸರಳವಾಗಿ ಗಣೇಶೋತ್ಸವ ಆಚರಿಸಿದ್ದ ರಾಜ್ಯದ ಜನತೆ ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್​ ಇಲಾಖೆ ಈ ಬಾರಿ ಪೊಲೀಸ್​ ತರಬೇತಿ ಪಡೆಯುತ್ತಿರುವ 2,332 ಅಧಿಕಾರಿ ಹಾಗೂ ಸಿಬ್ಬಂದಿ ಪ್ರಶಿಕ್ಷಣಾಥಿ೯ಗಳನ್ನು ಗಣೇಶೋತ್ಸವ ಭದ್ರತೆಗೆ ನಿಯೋಜಿಸಲು ಮುಂದಾಗಿದೆ.
    ಗಣೇಶೋತ್ಸವ ಬೆನ್ನಲ್ಲೇ ಬಿಬಿಎಂಪಿ, ನಂತರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸ್ಪಧಿ೯ಗಳು, ಆಕಾಂಕ್ಷಿಗಳ ನಡುವೆ ಈಗಾಗಲೇ ಪೈಪೋಟಿ ಶುರುವಾಗಿದೆ. ಹಲವು ಸೂಕ್ಷ್ಮಪ್ರದೇಶಗಳು ಗಲಭೆಕೋರರ ಟಾರ್ಗೆಟ್​ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ನಡುವೆ ಕೆಲ ಪ್ರದೇಶಗಳಲ್ಲಿ ಕೋಮುಗಲಭೆಗಳು ನಡೆದಿರುವ ಕಾರಣ ಖಾಕಿ ಪಡೆ ಈ ಬಾರಿ ಭಾರಿ ಬಗಿ ಬಂದೋಬಸ್ತ್​ ಕೈಗೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
    ರಾಜ್ಯದಲ್ಲಿ ಮೈಸೂರು, ಕಲಬುರಗಿ, ಹಾಸನ, ಥಣಿಸಂದ್ರ, ಚಿಕ್ಕಮಗಳೂರು, ಧಾರವಾಡ, ಯಲಹಂಕ, ಐಮಂಗಲಗಳಲ್ಲಿ ಈಗಾಗಲೇ ಪೊಲೀಸ್​ ಅಧಿಕಾರಿ, ಸಿಬ್ಬಂದಿ ಸ್ಥಾನಕ್ಕೆ ಆಯ್ಕೆಯಾಗಿ, ತರಬೇತಿ ಪಡೆಯುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿಗೆ ನಿಯೋಜಿಸುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ ಕುಮಾರ ತರಬೇತಿ ವಿಭಾಗದ ಡಿಜಿಪಿ ಡಾ.ರವೀಂದ್ರನಾಥ ಅವರಿಗೆ ಪತ್ರ ಬರೆದಿದ್ದು, ಇದರ ಪ್ರತಿ “ವಿಜಯವಾಣಿ’ಗೆ ಲಭ್ಯವಾಗಿದೆ.
    ಎಲ್ಲಿಗೆ ಎಷ್ಟು ನಿಯೋಜನೆ ?
    ಮೈಸೂರಿನ ಕೆಪಿಎದಲ್ಲಿ ತರಬೇತಿ ಪಡೆಯುತ್ತಿರುವ 20 ಡಿಎಸ್​ಪಿಗಳು, ಕಲಬುರಗಿ ಪಿಟಿಎಸ್​ನ 60 ಎಕ್ಸ್​- ಪಿಎಸ್​ಐಗಳು, ಹಾಸನ ಪಿಟಿಎಸ್​ನ 194 ಸಿಪಿಸಿಗಳು, ಥಣಿಸಂದ್ರದ 490 ಸಿಪಿಸಿಗಳು, ಚಿಕ್ಕಮಗಳೂರಿನ 109 ಮಪಿಸಿಗಳು, ಧಾರವಾಡದ 109 ಮಪಿಸಿಗಳನ್ನು ಶಿವಮೊಗ್ಗ ಜಿಲ್ಲೆಗೆ ನಿಯೋಜಿಸಲು ಕೋರಲಾಗಿದೆ. ಕಲಬುರಗಿ ಪಿಟಿಎಸ್​ನ 102 ಆರ್​ಎಸ್​ಐಗಳು, 45 ಪಿಎಸ್​ಐಗಳು, 50 ಕೆಎಸ್​ಐಎಸ್​ಎ್​, ಕಡೂರಿನ 238 ಸಿಪಿಸಿಗಳನ್ನು ಹುಬ್ಬಳ್ಳಿ- ಧಾರವಾಡ ಕಮಿಷನರೇಟ್​ಗೆ, ಯಲಹಂಕದ 168 ಸಿಪಿಸಿಗಳು, ಐಮಂಗಲದ 436 ಸಿಪಿಸಿಗಳು, ಮೈಸೂರಿನ 242 ಮಪಿಸಿಗಳನ್ನು ಬೆಳಗಾವಿ ನಗರಕ್ಕೆ ನಿಯೋಜಿಸುವಂತೆ ಎಡಿಜಿಪಿ ಅಲೋಕ ಕುಮಾರ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts