More

    ಸರ್ವಪಕ್ಷ ಸಭೆ: ರಾಜ್ಯಪಾಲರ ಪ್ರವೇಶಕ್ಕೆ ಸಿದ್ದರಾಮಯ್ಯ ಸಿಡಿಮಿಡಿ…

    ಬೆಂಗಳೂರು: ಕರೊನಾ ಹತ್ತಿಕ್ಕುವ ವಿಚಾರವಾಗಿ ಇಂದು ನಡೆದ ಸರ್ವಪಕ್ಷ ಸಭೆಯನ್ನು ರಾಜ್ಯಪಾಲರು ಮುನ್ನೆಡೆಸಿದ್ದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.

    ರಾಜ್ಯಪಾಲರ ಸಮ್ಮುಖದಲ್ಲೇ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಸರ್ವಪಕ್ಷ ಸಭೆಯ ಸಾಂವಿಧಾನಿಕ ಮಾನ್ಯತೆಯನ್ನು ಅವರು ಪ್ರಶ್ನಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲರನ್ನು ಕುಟುಕಿದರು.

    ಚುನಾಯಿತ ಸರ್ಕಾರ ಇದ್ದಾಗ್ಯೂ ಅದರ ಹೆಗಲ ಮೇಲೆ ಕೂತು ರಾಜ್ಯಪಾಲರು ಸಭೆ ನಡೆಸಿದ್ದೆಷ್ಟು ಸರಿ ಎಂಬುದು ಅವರು ಪ್ರಶ್ನೆಯಾಗಿತ್ತು. ಕಠಿಣ ಕ್ರಮ ಕೈಗೊಳ್ಳುವ ಬದಲು ಚುನಾವಣೆ ರಾಲಿಗಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರಲ್ಲದೇ, ಸಚಿವರು ಹಾಗೂ ಸಿಎಂ ಮಧ್ಯೆ ಸಮನ್ವಯ ಇಲ್ಲವೆಂಬ ಸಂಗತಿಯನ್ನು ಸಭೆಯಲ್ಲಿ ಬಿಂಬಿಸಿದ್ದಾರೆ. ಹಾಗೆಯೇ ಕರೊನಾ ವಿಷಯದಲ್ಲಿ ತಜ್ಞರು ಹೇಳಿದ್ದನ್ನು ಕೇಳಿ ಎಂದು ಸಚಿವರ ಕಿವಿ ಹಿಂಡಿದರು. 144 ಸೆಕ್ಷನ್ ಹಾಕಿ ಜನರ ಗುಂಪು ಸೇರುವುದು ನಿಯಂತ್ರಿಸಿ ಎಂದು ಸಲಹೆ ನೀಡಿದರು.

    ಇನ್ನೊಂದೆಡೆ ಸರ್ವಪಕ್ಷ ಸಭೆ ಅಂತ್ಯಗೊಂಡಿದ್ದು ಲಾಕ್​ಡೌನ್ ಬಗ್ಗೆ ಹಾಗೂ ಕರೊನಾ ಹತ್ತಿಕ್ಕುವ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರು ಮಾರ್ಗದರ್ಶಿಸೂತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ.

    ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಸಿಗದೆ ನಾನ್​ ಕೋವಿಡ್ ರೋಗಿ ಸಾವು!

    ಕರೊನಾವೈರಸ್​ಗೆ ಬಲಿಯಾದ ಉತ್ತರ ಪ್ರದೇಶದ ಮತ್ತೊಬ್ಬ ಸಚಿವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts