More

    ಡೇಟಾ ಮಿಸ್ ಆಗಿಲ್ಲ, ತಪ್ಪು ತಿಳುವಳಿಕೆ ಮೂಡಿಸುವುದು ಬೇಡ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಜಾತಿಗಣತಿ ವರದಿಯನ್ನು ಇನ್ನೆರೆಡು ದಿನದಲ್ಲಿ ಸಲ್ಲಿಕೆ ಮಾಡಲು ಹಿಂದುಳಿದ ವರ್ಗಗಳ ಆಯೋಗ ಮುಂದಾಗಿರುವಾಗಲೇ ಜಾತಿಗಣತಿ ವರದಿಯ ಮೂಲಪ್ರತಿ ಕಾಣೆಯಾಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗಡೆ ಅವರು ಸರ್ಕಾರಕ್ಕೆ 2021ರ ಅ.5 ರಂದು ಪತ್ರ ಬರೆದಿರುವುದು ವೈರಲ್ ಆಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.

    ಡೇಟಾ ಎಲ್ಲವೂ ಇದೆ‌, ಯಾವುದು ಮಿಸ್ ಆಗಿಲ್ಲ. ಸಾಫ್ಟ್​​​​​ವೇರ್ ನಲ್ಲೂ ಇದೆ. ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೇಟಾ ಇದೆ‌. ಆದರೆ ಹಿಂದೆ ಸಿದ್ದಪಡಿಸಿದ್ದ ಮೂಲ ಪ್ರತಿ ಇಲ್ಲ. ಅದು ವಿಷಯವೇ ಅಲ್ಲ. ಡೇಟಾ ಆಧರಿಸಿ ನಾವು ವರದಿ ಸಿದ್ದಪಡಿಸುತ್ತೇವೆ. ಸಿದ್ದಪಡಿಸುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ವರದಿ ಸಲ್ಲಿಸಲು ಒಂದು ತಿಂಗಳು ಹೆಚ್ಚುವರಿ ಅವಧಿ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಯಪ್ರಕಾಶ್, ಅದರ ಬಗ್ಗೆ ನೋ ಕಮೆಂಟ್ಸ್. ನನ್ನ ಸರ್ಕಾರದ ನಡುವೆ ನಡೆದ ಮಾತುಕತೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಡೇಟಾ ಮಿಸ್ ಆಗಿದೆ ಎಂದು ಯಾರೂ ತಪ್ಪು ತಿಳುವಳಿಕೆ ಮೂಡಿಸುವುದು ಬೇಡ ಎಂದು ಸ್ಪಷ್ಟಪಡಿಸಿದರು. 

    ಕೆನಡಾಕ್ಕೆ ಬಿಗ್ ರಿಲೀಫ್; ಕೆನಡಿಯನ್ನರಿಗೆ ಇ-ವೀಸಾ ಸೇವೆಗಳನ್ನು ಪುನರಾರಂಭಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts