More

    ಕರ್ನಾಟಕ ಕುಸ್ತಿ ಹಬ್ಬದ ವಿಜೇತರಿವರು

    ಹಾವೇರಿ: ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ತೃತೀಯ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಾ.3, 4ರಂದು ಜರುಗಿದ ಸ್ಪರ್ಧೆಯಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ಜಿಲ್ಲೆಗಳ ಕುಸ್ತಿಗಳು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
    ಪುರುಷರ ವಿಭಾಗ :
    14 ವರ್ಷದ ಬಾಲಕರ 38 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ವೆಂಕಟೇಶ, 17 ವರ್ಷದ ಬಾಲಕರ 45 ಕೆಜಿ ವಿಭಾಗದಲ್ಲಿ ಹಳಿಯಾಳದ ಶುಭಂ ತಂಸೋಷಗೌಡ ಪ್ರಥಮ, 41 ಕೆ.ಜಿ. ವಿಭಾಗದಲ್ಲಿ ಧಾರವಾಡದ ಸದೀಪ್ ನೇಸರಗಿ, 44 ಕೆ.ಜಿ. ವಿಭಾಗದಲ್ಲಿ ಧಾರವಾಡದ ಶಿವಾಜಿ ಗಾಯಕವಾಡ, 48 ಕೆ.ಜಿ. ವಿಭಾಗದಲ್ಲಿ ಧಾರವಾಡದ ಚೇತನ ತುಕ್ಕೋಜಿ, 57 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಲಕ್ಷಣ ಗೌಡರ, 68 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಕೃಷ್ಣ ಆಡೀನ್, 75 ಕೆ.ಜಿ. ವಿಭಾಗದಲ್ಲಿ ಧಾರವಾಡದ ಪ್ರಮೋದ ಎಂ., 48 ಕೆ.ಜಿ ವಿಭಾಗದಲ್ಲಿ ಧಾರವಾಡದ ಪವನ ಬೆನಕಪ್ಪನವರ, 51 ಕೆ.ಜಿ.ವಿಭಾಗದಲ್ಲಿ ಬೆಳಗಾವಿಯ ಮಧುಕುಮಾರ ಎಂ., 55 ಕೆ.ಜಿ ವಿಭಾಗದಲ್ಲಿ ಬಾಗಲಕೋಟೆಯ ರಾಘವೇಂದ್ರ ಕೃಷ್ಣಪ್ಪ ನಾಯಿಕ, 65 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಸಂಜೀವ ಪೂಜೇರ, 71 ಕೆ.ಜಿ.ವಿಭಾಗದಲ್ಲಿ ಬೆಳಗಾವಿಯ ಸಚಿನ್ ಚಿಕ್ಕಟ್ಟಿ, 80 ಕೆಜಿ ವಿಭಾಗದಲ್ಲಿ ಬೆಳಗಾವಿಯ ಭೀಮು ಕಾಟೆ ಪ್ರಥಮ ಸ್ಥಾನ ಪಡೆದಿದ್ದಾರೆ.
    ಮಹಿಳೆಯರ ವಿಭಾಗ :
    17 ವರ್ಷದ ಬಾಲಕಿಯರ 57 ಕೆ.ಜಿ ವಿಭಾಗದಲ್ಲಿ ಗದಗಿನ ಭುವನೇಶ್ವರಿ ಕೋಳಿವಾಡ, 69 ಕೆಜಿ ವಿಭಾಗದಲ್ಲಿ ಹಳಿಯಾಳದ ಪ್ರೈನ್ಸಿಟಾ ಪೆದ್ರು ಸಿದ್ದಿ, 14 ವರ್ಷದ ಬಾಲಕಿಯರ 36 ಕೆ.ಜಿ ವಿಭಾಗದಲ್ಲಿ ಹಳಿಯಾಳದ ವೈಷ್ಣವಿ ಅಣ್ಣಿಗೇರಿ, ಹಿರಿಯ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಗೋಪವ್ವಾ ಖೋಡ್ಕಿ, 53 ಕೆ. ಜಿ ವಿಭಾಗದಲ್ಲಿ ಗದಗಿನ ಸೋನಿಯಾ ಜಾದವ, 55 ಕೆ.ಜಿ ವಿಭಾಗದಲ್ಲಿ ಗದಗಿನ ಶಾಹಿದ್ ಬೇಗಂ ಪ್ರಥಮ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts