More

    ಶಿಗ್ಗಾಂವಿಯಲ್ಲಿ ಭರ್ಜರಿ ಕುಸ್ತಿ ಅಖಾಡ ಸಜ್ಜು; ರಾಜ್ಯಮಟ್ಟದ 3ನೇ ಕರ್ನಾಟಕ ಕುಸ್ತಿ ಹಬ್ಬ

    ಹಾವೇರಿ: ಬೆಳಗಾವಿ ಹಾಗೂ ಹುಬ್ಬಳ್ಳಿ ನಂತರ ಮುಖ್ಯಮಂತ್ರಿಯವರ ತವರು ಶಿಗ್ಗಾಂವಿಯಲ್ಲಿ ಮಾ.2ರಿಂದ 5ರವರೆಗೆ ನಡೆಯಲಿರುವ ರಾಜ್ಯಮಟ್ಟದ 3ನೇ ಕರ್ನಾಟಕ ಕುಸ್ತಿ ಹಬ್ಬಕ್ಕೆ ಶಿಗ್ಗಾಂವಿ ಅಖಾಡ ಸಕಲ ರೀತಿಯಲ್ಲೂ ಸಜ್ಜಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಕುಸ್ತಿಪಟುಗಳು ಶಿಗ್ಗಾಂವಿಗೆ ಬಂದಿಳಿದಿದ್ದು, ಮಾ.2ರಂದು ಅಧಿಕೃತ ಚಾಲನೆ ದೊರೆಯಲಿದೆ.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ ಹಾಗೂ ಜಿಲ್ಲೆಯ ಪೈಲ್ವಾನರ ಸಹಯೋಗದಲ್ಲಿ ಶಿಗ್ಗಾಂವಿಯ ಶ್ರೀ ರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಹಿಂಭಾಗದ ಮೈದಾನದಲ್ಲಿ ಮಾ.2ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. 2, 3, 4, 5ರಂದು ಒಟ್ಟು ಎಂಟು ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಗಳು ಜರುಗಲಿವೆ.
    ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮೈದಾನದಲ್ಲಿ ಅಖಾಡ ಕುಸ್ತಿಗೆ 9/9 ಮೀಟರ್ ಸುತ್ತಳತೆಯ ಮೂರು ಅಖಾಡಗಳನ್ನು ಸಿದ್ಧಪಡಿಸಿದೆ. 12 ಸಾವಿರ ಜನರು ಕುಳಿತು ವೀಕ್ಷಿಸಲು ಗ್ಯಾಲರಿ ನಿರ್ಮಿಸಿದೆ. ಎಂಟು ಸಾವಿರ ಜನ ನೆಲದಲ್ಲಿ ಕುಳಿತು ಕುಸ್ತಿ ಪಂದ್ಯಾವಳಿಗಳನ್ನು ವಿಕ್ಷೀಸಬಹುದಾಗಿದೆ. ನೋಂದಣಿಯ ಮೊದಲ ದಿನ ಮಾ.1ರಂದು ಸಂಜೆವರೆಗೆ 960 ಕುಸ್ತಿಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts