More

    ಗಡಿ ಪ್ರದೇಶ ಮುಚ್ಚುಗಡೆ ವದಂತಿ

    ಮಂಗಳೂರು: ಕಾಸರಗೋಡು (ಕೇರಳ) ಮತ್ತು ದಕ್ಷಿಣ ಕನ್ನಡದ (ಕರ್ನಾಟಕ)ಎಲ್ಲ ಗಡಿ ಪ್ರದೇಶಗಳನ್ನು ಪೂರ್ಣವಾಗಿ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಹರಡುತ್ತಿರುವ ವದಂತಿಗಳನ್ನು ಉಭಯ ಜಿಲ್ಲೆಗಳ ಜಿಲ್ಲಾಡಳಿತಗಳು ಅಧಿಕೃತ ಪ್ರಕಟಣೆ ಮೂಲಕ ನಿರಾಕರಿಸಿವೆ.
    ಜಿಲ್ಲೆಯ ಎಲ್ಲ ಗಡಿ ಪ್ರದೇಶಗಳನ್ನು ಮುಚ್ಚಲಾಗುತ್ತಿದೆ ಎಂದು ವ್ಯಾಪಕವಾಗಿ ಅಪಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೊಸತಾಗಿ ಗಡಿಭಾಗಗಳನ್ನು ಮುಚ್ಚಿಲ್ಲ. ಆ ವಿಷಯದಲ್ಲಿ ಸಮಾಲೋಚನೆಯೂ ನಡೆದಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
    ಕೋವಿಡ್ ನಿಯಂತ್ರಣ ಚಟುವಟಿಕೆಗಳ ಭಾಗವಾಗಿ ಈ ಹಿಂದೆಯೇ ಮುಚ್ಚಲಾಗಿರುವ ಗಡಿ ಪ್ರದೇಶಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಜೂ.30ರಂದು ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿದ್ದ ಚೆಂಗಳ ಗ್ರಾಪಂ ನಿವಾಸಿಯೊಬ್ಬರು ಮುಚ್ಚುಗಡೆ ಮಾಡಲಾಗಿದ್ದ ಗಡಿ ಮೂಲಕ ಅಕ್ರಮ ಪ್ರವೇಶ ಮಾಡಿ ಜಿಲ್ಲೆಗೆ ಬಂದಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್, ಆರೋಗ್ಯ, ಅರಣ್ಯ ಇಲಾಖೆಗಳ ಸಿಬ್ಬಂದಿಯಿಂದ ಭದ್ರತೆ ಹೆಚ್ಚಿಸಲಾಗಿದೆ ಎಂದವರು ವಿವರಣೆ ನೀಡಿದ್ದಾರೆ.
    ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ ಜುಲೈ 4 ಮಧ್ಯರಾತ್ರಿಯಿಂದ ದಕ್ಷಿಣ ಕನ್ನಡದ ಎಲ್ಲ ಗಡಿಭಾಗಗಳನ್ನು ಮುಚ್ಚಲಾಗುವುದು ಮತ್ತು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಜಾರಿಗೆ ಬರಲಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳು ಹರಡುತ್ತಿವೆ. ಇದು ಸುಳ್ಳು. ಇಂತಹ ತೀರ್ಮಾನ ತೆಗೆದುಕೊಂಡಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕಟಣೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts