More

    ಕರ್ನಾಟಕ ಶ್ರೀಮಂತಿಕೆಯ ನಾಡು

    ನರಗುಂದ: ಶ್ರೀಮಂತಿಕೆಯ ಕನ್ನಡ ನಾಡು ನಮ್ಮದು. ಕನ್ನಡ ಏಕೀರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

    ನಗರದ ಪುರಸಭೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡದವರೇ ಆದ 8 ಕವಿಪುಂಗವರು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ನಾಡಿನ ಎಲ್ಲರಿಗೂ ಹೆಮ್ಮೆ ಮತ್ತು ಗೌರವ ತಂದಿದೆ ಎಂದರು. ಉಪನ್ಯಾಸಕ ಎಚ್.ಎ. ಮುದಿಯಪ್ಪನವರ ಮಾತನಾಡಿ, ಸಿಂಧೂ ನಾಗರಿಕತೆಯ ವಿಶಿಷ್ಟ ಸಾಧನೆ ಮತ್ತು ಪರಾಮರ್ಶೆಯ ಮೂಲಕ ಕರ್ನಾಟಕ ಸಂಸ್ಕೃತಿ ಹುಟ್ಟಿಕೊಂಡಿತು. 1951ರಲ್ಲಿ ಸಲ್ಲಿಕೆಯಾದ ಧಾರಾ ವರದಿ ಪ್ರಕಾರ ರಾಜ್ಯದಲ್ಲಿ ಕನ್ನಡ ಬಳಕೆಗೆ ಬಂದು ನಾಡಿನ ಜನತೆಗೆ ಕನ್ನಡದ ಮಹತ್ವ ಸಾರಿದೆ ಎಂದು ತಿಳಿಸಿದರು.

    ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮಕ್ಕೂ ಪೂರ್ವ ಭೈರನಹಟ್ಟಿ ದೊರೆಸ್ವಾಮಿ ಮಠದಿಂದ ನಿರ್ವಿುಸಲಾದ ನೂತನ ರಥವನ್ನು ಲೋಕಾರ್ಪಣೆ ಮಾಡುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

    ಹಿರಿಯ ಸಾಹಿತಿ ಶಾಂತಲಾ ಯೋಗೀಶ ಯಡ್ರಾವಿ, ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಮಂಜುಳಾ ಹಕಾರಿ, ಬಿಇಒ ಗುರುನಾಥ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಅಮೀತ ತಾರದಾಳೆ, ಎನ್.ಆರ್. ನಿಡಗುಂದಿ, ಸುಕನ್ಯಾ ಸಾಲಿ, ಲೀಲಕ್ಕ ಹಸಬಿ, ಎಂ.ಬಿ. ಪಾಟೀಲ, ಬಸವಣ್ಣೆವ್ವ ವಡ್ಡಿಗೇರಿ, ಸಿಪಿಐ ಮಂಜುನಾಥ ನಡುವಿನಮನಿ, ಚಂದ್ರು ದಂಡಿನ, ಶಿವಾನಂದ ಮುತವಾಡ, ವಸಂತ ಜೋಗಣ್ಣವರ, ಎ.ಎಂ. ಹುಡೇದ, ಪ್ರಶಾಂತ ಜೋಶಿ, ಉಮೇಶಗೌಡ ಪಾಟೀಲ, ಭಾವನಾ ಪಾಟೀಲ, ಎಂ.ಐ. ಮೇಟಿ, ಚಂದ್ರಗೌಡ ಪಾಟೀಲ, ಶಂಕರ ಪಲ್ಟನಕರ್, ಕಸಾಪ ತಾಲೂಕಾಧ್ಯಕ್ಷ ಬಿ.ಸಿ. ಹನುಮಂತಗೌಡ್ರ, ಇತರರಿದ್ದರು. ಅರವಿಂದ ಮೇಗೂರ, ಎಸ್.ಪಿ. ದೊಡಮನಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಎಂ.ಬಿ. ಪಾಟೀಲ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts