More

    ಪ್ರಧಾನಿ ಘೋಷಣೆಗೆ ಪೂರಕವಾಗಿ ಕರ್ನಾಟಕ ಸಿದ್ಧ; 65 ಲಕ್ಷ ಡೋಸ್ ಲಸಿಕೆ ದಾಸ್ತಾನು

    ಬೆಂಗಳೂರು: ಮತ್ತೊಂದು ಸುತ್ತಿನ ಲಸಿಕೆ ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸುತ್ತಿದ್ದಂತೆ ರಾಜ್ಯದ ಆರೋಗ್ಯ ಇಲಾಖೆ ಕೂಡ ಲಸಿಕೆ ವಿತರಣೆಗೆ ಪುನಃ ಮೈಕೊಡವಿ ನಿಂತಿದೆ.

    15ರಿಂದ 18 ವಯೋಮಾನದವರಿಗೆ ಜನವರಿ 3ರಿಂದ ಲಸಿಕೆ ವಿತರಿಸಲು ಅಗತ್ಯವಾದಷ್ಟು ದಾಸ್ತಾನು ಮಾಡಿಕೊಳ್ಳಲು ಚುರುಕಿನ ತಯಾರಿ ಮಾಡಿಕೊಂಡಿದೆ. ಪ್ರಸ್ತುತ 65 ಲಕ್ಷ ಡೋಸ್ ಲಸಿಕೆ ರಾಜ್ಯದಲ್ಲಿ ಲಭ್ಯವಿದ್ದು, ವಿತರಣೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಜೋಡಿಸುವ ಕೆಲಸ ಮಾತ್ರ ಬಾಕಿ ಇದೆ.

    ವಿಜಯವಾಣಿಯೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಜನವರಿ 3ರಿಂದ ಲಸಿಕೆ ವಿತರಣೆಗೆ ಅಗತ್ಯವಾದ ಯೋಜನೆ ಸಿದ್ಧವಿದೆ. ಅಗತ್ಯ ದಾಸ್ತಾನು ಸಹ ಇದೆ. ನಮ್ಮ ತಂಡ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: 15ರಿಂದ 18ರ ವಯೋಮಾನದವರಿಗೂ ಕರೊನಾ ಲಸಿಕೆ, ಜ. 3ರಂದೇ ಆರಂಭ; ಪ್ರಧಾನಿ ಮೋದಿ ಘೋಷಣೆ

    ಪ್ರಧಾನ ಮಂತ್ರಿಯವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಬೇಕು. 15ರಿಂದ 18 ವಯೋಮಾನದವರಿಗೆ ಲಸಿಕೆ ಕೊಡುವುದಕ್ಕೆ ಅನುಮತಿ ನೀಡುವುದು ಒಂದು ಭಾಗವಾದರೆ ಫ್ರಂಟ್​​ಲೈನ್ ಕಾರ್ಯಕರ್ತರಿಗೆ, ಹಿರಿಯರಿಗೆ ಬೂಸ್ಟರ್ ಲಸಿಕೆಗೆ ಅವಕಾಶ ನೀಡಿರುವುದು ಸಮಯೋಚಿತ. ಈ ಸಂದರ್ಭದಲ್ಲಿ ಅಗತ್ಯವಾಗಿತ್ತು ಎಂದು ವಿವರಿಸಿದರು.

    ಶಾಲಾ ಮಕ್ಕಳಿಗೆ ಶಾಲೆಯಲ್ಲೇ ಲಸಿಕೆ ಕೊಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಮಾರ್ಗಸೂಚಿ ಹೊರಡಿಸಲಿದ್ದು, ಆ ಪ್ರಕಾರವೇ ಲಸಿಕೆ ವಿತರಣೆ ನಡೆಯಲಿದೆ ಎಂದರು. ಇನ್ನು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಲಸಿಕೆ ವಿತರಣೆ ಅನಿವಾರ್ಯತೆ ಬಗ್ಗೆ ತಜ್ಞರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಈ ವರದಿಯನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿತ್ತು ಎಂದರು.

    ನಮ್ಮ ರಾಜ್ಯದಲ್ಲಿ ಜ. 3ರಿಂದ ಲಸಿಕೆ ವಿತರಣೆಗೆ ತಯಾರಾಗಿದ್ದೇವೆ. ಸಮಯೋಚಿತ ನಿರ್ಧಾರ ಕೈಗೊಂಡ ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುವೆ.
    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts