More

    ಕರ್ನಾಟಕ ಹಿಜಾಬ್​ ಬ್ಯಾನ್​ ಕೇಸ್​: ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಸಿಜೆಐ ಪೀಠಕ್ಕೆ ವರ್ಗಾವಣೆ

    ನವದೆಹಲಿ: ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ಮೇಲೆ ಸುಪ್ರೀಂಕೋರ್ಟ್​ನಲ್ಲಿ ಗುರುವಾರ ವಿಭಿನ್ನ ತೀರ್ಪು ಪ್ರಕಟವಾಯಿತು. ಓರ್ವ ನ್ಯಾಯಮೂರ್ತಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಿಸಿದರೆ, ಇನ್ನೊರ್ವರು ಹೈಕೋರ್ಟ್​ ಆದೇಶವನ್ನು ರದ್ದು ಮಾಡಿದರು. ಈ ಎರಡು ವಿಭಿನ್ನ ತೀರ್ಪಿನಿಂದ ಜನರಲ್ಲಿನ ಗೊಂದಲಕ್ಕೆ ಮತ್ತಷ್ಟು ನೀರೆರೆದಂತಾಗಿದೆ. ಇದೀಗ ಹಿಜಾಬ್​ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ.

    ನ್ಯಾಯಪೀಠದ ಸದಸ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಸಿದರೆ, ಮತ್ತೊರ್ವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಬಾಜ್​ ಬ್ಯಾನ್​ ಮಾಡಿ ಹೈಕೋರ್ಟ್​ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದರು. ನ್ಯಾಯಮೂರ್ತಿಗಳಲ್ಲೇ ವಿಭಿನ್ನ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ.

    ವಿಭಿನ್ನ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶವಿಲ್ಲ. ಮುಂದಿನ ತೀರ್ಪು ಬರುವವರೆಗೂ ಹೈಕೋರ್ಟ್​ ತೀರ್ಪನ್ನೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ. ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ ಆಗಿದ್ದು, ಮುಂದೆ ಸಿಜೆಐ ಅವರು ವಿಸ್ತೃತ ಪೀಠ ರಚನೆ ಮಾಡಲಿದ್ದು, ಅಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೂ ಹೈಕೋರ್ಟ್​ ತೀರ್ಪನ್ನೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ.

    ಮುಸ್ಲಿಂ ವಿದ್ಯಾರ್ಥಿನಿಯರ ದೃಷ್ಟಿಯಿಂದ ಹೈಕೋರ್ಟ್​ ಆದೇಶವನ್ನು ವಿರೋಧಿಸುತ್ತೇನೆ. ಹಿಜಾಬ್​ ಧರಿಸುವುದು ಅವರವರ ಆಯ್ಕೆಗೆ ಬಿಟ್ಟಿದ್ದು, ಇಲ್ಲಿ ಹೈಕೋರ್ಟ್ ತೀರ್ಪು ಸರಿಯಲ್ಲ. ಇದು ಅಂತಿಮವಾಗಿ ಆಯ್ಕೆ ಮತ್ತು ಆರ್ಟಿಕಲ್ 14 ಹಾಗೂ 19ರ ವಿಷಯವಾಗಿದೆ ಎಂದು ನ್ಯಾಯಮೂರ್ತಿ ಸುಧಾಂಶು ಅಭಿಪ್ರಾಯಪಟ್ಟರು.

    ಪ್ರಕರಣದಲ್ಲಿ ಹಿಜಾಬ್ ಪರ 17 ವಕೀಲರು ವಾದಿಸಿದ್ದರೆ, ಶಾಲೆಗಳಲ್ಲಿ ಹಿಜಾಬ್ ಧಾರಣೆ ವಿರೋಧಿಸುವ ರಾಜ್ಯ ಸರ್ಕಾರದ ಆದೇಶ ಸಮರ್ಥಿಸಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಶಾಲೆಗಳ ಶಿಕ್ಷಕರ ಪರ ಹಿರಿಯ ವಕೀಲ ಆರ್. ವೆಂಕಟರಮಣಿ (ಹಾಲಿ ಅಟಾರ್ನಿ ಜನರಲ್) ವಾದಿಸಿದ್ದರು. 10 ದಿನ ಸುದೀರ್ಘ ವಿಚಾರಣೆ ಕೈಗೊಂಡಿದ್ದ ನ್ಯಾಯಪೀಠ, ಸೆ.22ರಂದು ತೀರ್ಪು ಕಾದಿರಿಸಿತ್ತು.

    ಕುಡುಕನಿಗೆ ಕಚ್ಚಿದ ಕೂಡಲೇ ನಾಗರಹಾವು ಸಾವು! ಭಯದಿಂದಲೇ ಸತ್ತ ಹಾವಿನ ಸಮೇತ ಆಸ್ಪತ್ರೆಗೆ ದಾಖಲು

    ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್! ಮುಂದೇನಾಯ್ತು ನೀವೇ ನೋಡಿ…​

    ಪ್ರೊ ಕಬಡ್ಡಿ ಲೀಗ್​ ಸೀಸನ್​ 9: ದೆಹಲಿಗೆ ಹ್ಯಾಟ್ರಿಕ್ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts