More

    5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್​ ಪರೀಕ್ಷೆ ರದ್ದು: ಹೈಕೋರ್ಟ್ ಮಹತ್ವದ ಆದೇಶ​

    ಬೆಂಗಳೂರು: ಐದು ಮತ್ತು ಎಂಟನೇ ತರಗತಿಗಳಿಗೆ ಪಬ್ಲಿಕ್​ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಹೆರೂರ್ ಅವರು ಇಂದು (ಮಾ.10) ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

    ಈ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ, ರುಪ್ಸಾ ಅಧ್ಯಕ್ಷ ಲೋಕೇಶ್​ ತಾಳಿಕಟ್ಟೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ವರ್ಷವೇ ಪಬ್ಲಿಕ್ ಪರೀಕ್ಷೆ ನೋಟಿಫಿಕೇಶನ್ ರದ್ದು ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಮಾ.13 ರಿಂದ 5, 8ನೇ ತರಗತಿ ಪರೀಕ್ಷೆ ಜರುಗಬೇಕಾಗಿತ್ತು. ಸಿಲೆಬಸ್​ ನೀಡದೇ ಪಬ್ಲಿಕ್​ ಪರೀಕ್ಷೆಗೆ ಹೇಗೆ ಹಾಜರಾಗುವುದು ಎಂಬ ಗೊಂದಲದಲ್ಲಿದ್ದ ಪಾಲಕರಿಗೆ ಹೈಕೋರ್ಟ್​ ಮಹತ್ವದ ಆದೇಶದಿಂದ ನಿಟ್ಟುಸಿರು ಬಿಡುವಂತಾಗಿದೆ.

    ಇದನ್ನೂ ಓದಿ: ಗ್ಯಾರಂಟಿ ಕಾರ್ಡ್ ಯೋಜನೆ ದೇಶಾದ್ಯಂತ ವಿಸ್ತರಣೆ: ಸುರ್ಜೆವಾಲ

    ನಿನ್ನೆಯಷ್ಟೇ ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಮೌಲ್ಯಂಕನ ಪರೀಕ್ಷೆಗೆ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿತ್ತು.

    2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಬೋಧನೆ ಮಾಡುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.13 ರಿಂದ 18ರ ವರೆಗೆ ಮೌಲ್ಯಂಕನ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಆದರೆ, ಇದೀಗ ಹೈಕೋರ್ಟ್​ ಪಬ್ಲಿಕ್​ ಪರೀಕ್ಷೆಗೆ ಬ್ರೇಕ್​ ಹಾಕಿದೆ. (ದಿಗ್ವಿಜಯ ನ್ಯೂಸ್​)

    ತಮನ್ನಾ ಲೇಡಿ ರೌಡಿ ಗ್ಯಾಂಗ್​! ಹಣಕ್ಕಾಗಿ ನೀಚ ಕೃತ್ಯ, ಈಕೆಯ ಪುಂಡಾಟಿಕೆ ಒಂದೆರಡಲ್ಲ ಎಂದ ಪೊಲೀಸರು

    ಹೊಸ ಜಾತಿಯ ಜಿರಳೆಗಳು ಪತ್ತೆ; ಹೆಸರೇನು ಗೊತ್ತೇ?

    ವಿವಾಹಕ್ಕೂ ಮುನ್ನ ಇಬ್ಬರ ಜತೆ ಪ್ರೀತಿ ; ಮಕ್ಕಳು ಹುಟ್ಟಿದ ನಂತರ ಮದುವೆಯಾದ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts