ವಿವಾಹಕ್ಕೂ ಮುನ್ನ ಇಬ್ಬರ ಜತೆ ಪ್ರೀತಿ ; ಮಕ್ಕಳು ಹುಟ್ಟಿದ ನಂತರ ಮದುವೆಯಾದ ಜೋಡಿ!

ತೆಲಂಗಾಣ: ಮದುವೆಗೂ ಮುನ್ನ ಇಬ್ಬರ ಜತೆ ಪ್ರೀತಿಯಲ್ಲಿದ್ದ ಯುವಕ ಇಬ್ಬರು ಪ್ರೇಯಸಿಯರ ಜತೆ ಸಂಸಾರ ನಡೆಸಿದ್ದಾನೆ. ನಂತರ ಇವರಿಬ್ಬರಿಗೆ ಮಗು ಜನಿಸಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವಿವಾಹವಾಗಿದ್ದಾನೆ. ತೆಲಂಗಾಣದ ಬುಡಕಟ್ಟು ಸಮುದಾಯದ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದ ಸತ್ತಿಬಾಬು ಕಳೆದ ಮೂರು ವರ್ಷಗಳಿಂದ ಸುನೀತಾ, ಸ್ವಪ್ನಾ ಜತೆ ಸಂಬಂಧವನ್ನು ಹೊಂದಿದ್ದು, ಇಬ್ಬರೂ ಮಹಿಳೆಯರಿಗೂ ತಲಾ ಒಂದು ಮಗುವನ್ನು ಕರುಣಿಸಿದ್ದಾನೆ. ಸುನೀತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. … Continue reading ವಿವಾಹಕ್ಕೂ ಮುನ್ನ ಇಬ್ಬರ ಜತೆ ಪ್ರೀತಿ ; ಮಕ್ಕಳು ಹುಟ್ಟಿದ ನಂತರ ಮದುವೆಯಾದ ಜೋಡಿ!