More

    65 ವರ್ಷ ಮೇಲ್ಪಟ್ಟವರು ಹೊರಗೆ ಬರಬಾರದೆಂಬುದು ಸಲಹೆ ಅಷ್ಟೆ, ಕಾನೂನಲ್ಲ: ಕೇಂದ್ರ

    ಬೆಂಗಳೂರು: ಕರೊನಾ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ 65 ವರ್ಷ ಮೇಲ್ಪಟ್ಟವರು ಮನೆಗಳಿಂದ ಹೊರಬಾರದಂತೆ ಸಲಹೆ ನೀಡಲಾಗಿದ್ದು, ಅದನ್ನು ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

    65 ವರ್ಷ ಮೀರಿದ ನಾಗರಿಕರ ಸಂಚಾರ ನಿರ್ಬಂಧಿಸಿ ಮೇ 18ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬಿ.ಎನ್. ಜಯದೇವ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

    ಇದನ್ನೂ ಓದಿ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 515 ಕರೊನಾ ಪ್ರಕರಣಗಳು; ಉಡುಪಿಯಲ್ಲಿ ದ್ವಿಶತಕ

    ಕೇಂದ್ರ ಸರ್ಕಾರದ ಪರ ವಕೀಲರು ಮೇ 30ರಂದು ಹೊರಡಿಸಿದ್ದ ಹೊಸ ಆದೇಶದ ಪ್ರತಿಯನ್ನು ಮೆಮೊ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

    65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ 10 ವರ್ಷಕ್ಕೂ ಕಡಿಮೆ ವಯಸಿನ ಮಕ್ಕಳು ಮನೆಯಲ್ಲೇ ಉಳಿಯುವಂತೆ ಸಲಹೆ ನೀಡಲಾಗಿದೆಯೇ ಹೊರತು ಕಡ್ಡಾಯಗೊಳಿಸಿಲ್ಲ ಎಂದು ಅದರಲ್ಲಿ ತಿಳಿಸಿದ್ದಾರೆ. ಅದನ್ನು ಪರಿಗಣಿಸಿದ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿತು.

    ಇದನ್ನೂ ಓದಿ ಕರೊನಾಗೆ ಪತ್ನಿ ಬಲಿ, ಐಸೋಲೇಶನ್​ನಲ್ಲಿ ಪತಿ

    ಕರೊನಾ ಪತ್ತೆ, ಚಿಕಿತ್ಸೆ ಇನ್ನು ಸುಲಭ- ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts