More

    ದಕ್ಷಿಣ ಕನ್ನಡ ರಾಮಕುಂಜದಲ್ಲಿ 98.45 ಎಕರೆ ಪ್ರದೇಶದಲ್ಲಿ ಗೋಶಾಲೆ

    ಪ್ರವೀಣ್‌ರಾಜ್ ಕಡಬ
    ರಾಜ್ಯ ಸರ್ಕಾರದ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಮಕುಂಜ ಗ್ರಾಮದ ಪೆರ್ಜಿಯಲ್ಲಿ 98.45 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ.

    ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಧೀನದಲ್ಲಿದ್ದ ರಾಮಕುಂಜ ಗ್ರಾಮದ ಸರ್ವೇ ನಂಬರ್ 233ರಲ್ಲಿ 85.20 ಎಕರೆ ಮತ್ತು ಸರ್ವೇ ನಂಬರ್ 299/1ರಲ್ಲಿ 13.25 ಎಕರೆ ಸೇರಿ ಒಟ್ಟು 98.45 ಎಕರೆ ಜಾಗದಲ್ಲಿ ಸರ್ಕಾರದಿಂದ ಮಂಜೂರು ಆಗಿರುವ ಪ್ರಾಣಿ ದಯಾ ಸಂಘದ ಮೂಲಕ ಜಿಲ್ಲಾ ಗೋಶಾಲೆ ಆರಂಭವಾಗಲಿದೆ. ಮಂಜೂರಾದ ಜಾಗ ಹಸ್ತಾಂತರ ಈಗಾಗಲೇ ನಡೆದಿದೆ.

    ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಗೋಶಾಲೆಗೆ ಅತಿ ಹೆಚ್ಚು ಜಾಗ ದೊರೆತಿದೆ. ಮಂಜೂರಾದ ಜಾಗದ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಎಂಡೋ ಪಾಲನಾ ಕೇಂದ್ರ ಹಾಗೂ ರೇಷ್ಮೆ ಇಲಾಖೆಯ ಹಳೆಯ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳುವ ಯೋಜನೆಯಿದೆ. ಮಂಜೂರಾದ ಜಾಗದ ಸುತ್ತ ಸುಸಜ್ಜಿತ ಬೇಲಿ ನಿರ್ಮಾಣ, ಅಗತ್ಯ ಕಟ್ಟಡಗಳ ನಿರ್ಮಾಣ, ನೀರು ವ್ಯವಸ್ಥೆ ನಡೆಯಲಿದೆ. ಆರಂಭದಲ್ಲಿ ಬೇಲಿ ನಿರ್ಮಾಣದ ಕಾರ್ಯ ನಡೆಸಲಾಗುವುದು ಎನ್ನುತಾರೆ ಅಧಿಕಾರಿಗಳು.

    ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ 24 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಪ್ರಾಣಿ ದಯಾ ಸಂಘದ ಮೂಲಕ ಶೀಘ್ರ ಗೋಶಾಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
    – ಡಾ.ಪ್ರಸನ್ನ ಕುಮಾರ್ ಟಿ.ಜಿ., ದ.ಕ. ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ

    ಅಶಕ್ತ ಗೋವುಗಳನ್ನು ಸಾಕಲು ಸರ್ಕಾರದಿಂದ ಗೋಶಾಲೆ ನಿರ್ಮಾಣವಾಗಬೇಕೆಂಬ ಹಿಂದುಪರ ಸಂಘಟನೆಗಳ ಹಲವು ವರ್ಷಗಳ ಬೇಡಿಕೆಗೆ ಪ್ರಸಕ್ತ ಸರ್ಕಾರ ಸ್ಪಂದಿಸಿರುವುದು ಸಂತಸ ತಂದಿದೆ. ಮಂಜೂರಾಗಿರುವ ಗೋಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ.
    -ರಾಧಾಕೃಷ್ಣ ಕೋಲ್ಪೆ, ಅಧ್ಯಕ್ಷರು, ವಿಶ್ವ ಹಿಂದು ಪರಿಷತ್ ಕಡಬ ಪ್ರಖಂಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts