More

    ವಿಫಲವಾದ ಮುಖ್ಯ ಕಾರ್ಯದರ್ಶಿ ಮನವೊಲಿಕೆ; ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದ ಸರ್ಕಾರಿ ನೌಕರರು

    ಬೆಂಗಳೂರು: ಏಳನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸರ್ಕಾರಿ ನೌಕರರ ಜತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಮಾತುಕತೆ ನಡೆಸಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಿಎಂ ಬೊಮ್ಮಾಯಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

    ಮುಖ್ಯ ಕಾರ್ಯದರ್ಶಿ ಮನವೊಲಿಕೆ ವಿಫಲವಾಗಿದ್ದು, ಆದೇಶ ಆಗುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ. ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಎಸ್ಮಾ ಜಾರಿಗೊಳಿಸಿ, ಅಮಾನತು ಮಾಡಿದರೂ ನಾವು ಹೆದರುವುದಿಲ್ಲ. ಎಲ್ಲಾ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.

    ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ; ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ‌

    ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡುತ್ತಾ, ವೇತನ ಆಯೋಗದ ಅಧ್ಯಕ್ಷರನ್ನು ನಿನ್ನೆ ಭೇಟಿ ಆಗಿದ್ದೆ. ಆದರೆ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ನಿರ್ದೇಶನ ಬಂದಿಲ್ಲ ಎಂದಿದ್ದಾರೆ. ಮೂರು ದಿನ ಸಾಕು ವರದಿ ತೆಗೆದುಕೊಳ್ಳಲು. ಆದರೆ ವೇತನ ಆಯೋಗ ಜಾರಿ ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲ. ಹೀಗಾಗಿ ಮುಷ್ಕರ ಮುಂದುವರೆಸುತ್ತೇವೆ. ಆರೋಗ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತವಾಗಲಿದೆ ಎಂದರು.

    ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಸಂಜೆ ಆಯೋಗದ ಜತೆ ಮಾತನಾಡುತ್ತೇನೆ. ಮದ್ಯಂತರ ವರದಿ ತರಿಸಿಕೊಂಡು ಜಾರಿಗೆ ಕ್ರಮ ವಹಿಸಿದ್ದೇನೆ. ಬಜೆಟ್​​ನಲ್ಲಿ ಅದಕ್ಕಾಗಿ ಹಣ ತೆಗೆದಿರಿಸಿದ್ದೇನೆ. ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಇದನ್ನೂ ಓದಿ: VIDEO | ‘ಎಲೆಕೋಸು’ ವಿಚಾರಕ್ಕೆ ಬಿಜೆಪಿ ನಾಯಕನಿಂದ ಸರ್ಕಾರಿ ಅಧಿಕಾರಿಗೆ ಹೊಡೆತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts