More

    ಕರ್ನಾಟಕ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಎಎಪಿ

    ಬೆಂಗಳೂರು: ದೆಹಲಿ ಮತ್ತು ಪಂಜಾಬ್ ರೀತಿಯಲ್ಲಿ ಕರ್ನಾಕದಲ್ಲೂ ಅಧಿಕಾರದ ಗದ್ದುಗೆ ಏರಬೇಕೆಂಬ ಮಹದಾಸೆಯಿಂದ ಚುನಾವಣಾ ಅಖಾಡಕ್ಕೆ ಇಳಿದಿರುವ ಆಮ್​ ಆದ್ಮಿ ಪಕ್ಷ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ದೆಹಲಿಯ ಸಿಎಂ ಅರವಿಂದ್​ ಕೇಜ್ರಿವಾಲ್ ನೀಡುತ್ತಿರುವ ಜನಪರ ಆಡಳಿತವನ್ನು ರಾಜ್ಯದಲ್ಲೂ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಆಪ್​ ಜನರ ಬಳಿ ಮತಯಾಚನೆ ಮಾಡುತ್ತಿದೆ. ಎಲ್ಲ 224 ಕ್ಷೇತ್ರಗಳಲ್ಲೂ ಆಪ್​ ಸ್ಪರ್ಧೆ ಮಾಡಲು ಮುಂದಾಗಿದೆ ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಆಪ್​ ಇದೀಗ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಒಂದು ಹನಿ ನೀರು ಕೆಳಗೆ ಚೆಲ್ಲದಂತೆ ಮೆಟ್ರೋ ಒಳಗೆ ಸ್ನಾನ ಮಾಡಿದ ಯುವಕ! ವಿಡಿಯೋ ವೈರಲ್​

    ಮೂರನೇ ಹಂತದಲ್ಲಿ 28 ಕ್ಷೇತ್ರಗಳಿಗೆ ಆಮ್​ ಆದ್ಮಿ ಪಕ್ಷ ಟಿಕೆಟ್ ನೀಡಿದ್ದು,​​ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ​. ​

    Aap Karnataka 3rd List_page-0001

    Aap Karnataka 3rd List_page-0002

    ಇದನ್ನೂ ಓದಿ: ನೂರು ಕೋಟಿ ರೂ. ಕ್ಲಬ್ ಸೇರಿದ ಕರ್ನಾಟಕ ಚುನಾವಣಾ ಅಕ್ರಮ!

    ಮೊದಲ ಹಂದತದಲ್ಲಿ ಎಎಪಿ 80 ಅಭ್ಯರ್ಥಿಗಳ ಪಟ್ಟಿ‌ ಬಿಡುಗಡೆ ಮಾಡಿದೆ. ಎರಡನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ‌ಬಿಡುಗಡೆ ಮಾಡಿದ್ದು, 2ನೇ ಪಟ್ಟಿಯಲ್ಲಿ 11 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. 14 ರೈತರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಓರ್ವ ಬಿಎಂಟಿಸಿ ಮಾಜಿ ಕಂಡಾಕ್ಟರ್ ಗೂ ಅವಕಾಶ ನೀಡಲಾಗಿದೆ.

    ಕರ್ನಾಟಕ ಚುನಾವಣೆ ಯಾವ್ಯಾವ ದಿನ ಏನೇನು?
    * ಅಧಿಸೂಚನೆ ಪ್ರಕಟ: ಏಪ್ರಿಲ್​ 13
    * ನಾಮಪತ್ರ ಸಲ್ಲಿಕೆಯ ಕೊನೆಯ ದಿನ: ಏಪ್ರಿಲ್​ 20
    * ನಾಮಪತ್ರ ಮರುಪರಿಶೀಲನೆಗೆ ಕೊನೆಯ ದಿನ: ಏಪ್ರಿಲ್​​ 21
    * ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಏಪ್ರಿಲ್​ 24
    * ಮತದಾನದ ದಿನ: ಮೇ 10
    * ಮತ ಎಣಿಕೆ ಅಥವಾ ಫಲಿತಾಂಶ ದಿನ: ಮೇ. 13
    * ಸಂಪೂರ್ಣ ಚುನಾವಣಾ ಚಟುವಟಿಕೆ ಮುಕ್ತಾಯದ ದಿನ: ಮೇ 15

    224 ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನಸಭೆಯ ಅವಧಿಯು ಮೇ 24ಕ್ಕೆ ಕೊನೆಗೊಳ್ಳಲಿದೆ. ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಲ್ಲಿ ಸರ್ಕಾರ ರಚನೆಗೆ 113 ಸ್ಥಾನಗಳನ್ನು ಗೆಲ್ಲಬೇಕಿದೆ.

    ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಬಿಎಂಟಿಸಿ ಕಂಡಕ್ಟರ್​ಗೂ ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts