More

    ತಮಿಳು ನಟನ ತಂತ್ರಜ್ಞಾನಕ್ಕೆ ತಲೆಬಾಗಿದ ಕರ್ನಾಟಕ ಉಪ ಮುಖ್ಯಮಂತ್ರಿ

    ಕಾಲಿವುಡ್​ನ ಸ್ಟಾರ್ ನಟ ತಲಾ ಅಜಿತ್​ ಕುಮಾರ್ ಕೇವಲ ನಟ ಅಷ್ಟೇ ಅಲ್ಲ ಬಹುಮುಖ ಪ್ರತಿಭೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೀಗ ಅವರು ಮಾಡಿದ ಒಂದು ಕೆಲಸ ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್​. ಅಶ್ವತ್ಥನಾರಾಯಣ ಅವರ ಗಮನವನ್ನೂ ಸೆಳೆದು, ಅವರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಹಾಗಾದರೆ ನಟ ಅಜಿತ್​, ಕರ್ನಾಟಕದ ಉಪಮುಖ್ಯಮಂತ್ರಿಗಳು ಮೆಚ್ಚುವಂಥ ಕೆಲಸ ಮಾಡಿದ್ದಾದರೂ ಏನು? ಅದಕ್ಕೆ ಉತ್ತರ ಇಲ್ಲಿದೆ.

    ಇದನ್ನೂ ಓದಿ: ವಿಶಾಲ್ ಚಕ್ರಕ್ಕೆ ಯಶ್ ಸಾಥ್

    ಗಮನದಲ್ಲಿರಲಿ ನಟ ಅಜಿತ್​ ಕೇವಲ ನಟ ಅಷ್ಟೇ ಅಲ್ಲ. ಕಾರ್ ಮತ್ತು ಬೈಕ್​ ರೇಸರ್​, ಪರಿಣತಿ ಹೊಂದಿದ ಪೈಲಟ್​, ರೈಫಲ್​ ಶೂಟರ್​, ಅದ್ಬುತ ಛಾಯಾಗ್ರಾಹಕ ಸಹ. ಇದೇ ಅಜಿತ್​ ಪ್ರಾಜೆಕ್ಟ್​ವೊಂದರ ಸಲುವಾಗಿ 2018ರಲ್ಲಿ ಮದ್ರಾಸ್​ ಇನ್ಸಿಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ಸಿಸ್ಟಮ್​ ಸಲಹೆಗಾರರಾಗಿ, ಹೆಲಿಕಾಪ್ಟರ್​ ಪರೀಕ್ಷಾರ್ಥ ಚಾಲಕರಾಗಿ ಅಜಿತ್​ ನೇಮಕವಾಗಿದ್ದರು. ದಕ್ಷ ಹೆಸರಿನ ಡ್ರೋನ್​ (ಅನ್​ಆರ್ಮಡ್​ ಏರಿಯಲ್​ ವೇಹಿಕಲ್​) ಅಭಿವೃದ್ಧಿ ಪಡಿಸುವ ವಿದ್ಯಾರ್ಥಿಗಳಿಗೆ ಮೆಂಟರ್ ಆಗಿದ್ದರು. ಅಷ್ಟೇ ಅಲ್ಲ ಆ ಡ್ರೋನ್​ 2018ರಲ್ಲಿ ಮೆಡಿಕಲ್​ ಎಕ್ಸ್​ಪ್ರೆಸ್​ ಪ್ರಶಸ್ತಿ ಸಹ ಪಡೆದುಕೊಂಡಿತ್ತು. ಸತತವಾಗಿ 6ಗಂಟೆ ಏಳು ನಿಮಿಷ ಆಕಾಶದಲ್ಲಿ ಹಾರಾಡಿ ದಾಖಲೆ ಮಾಡಿತ್ತು.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಅದಾದ ಬಳಿಕ ಅದೇ ದಕ್ಷ ಡ್ರೋನ್​ ಇದೀಗ ಕರೊನಾ ಪೀಡಿತ ಪ್ರದೇಶದ ಬಗ್ಗೆ ಸರ್ವೇ ಕಾರ್ಯದಲ್ಲಿ ಭಾಗಿಯಾಗಿದೆ. ಸೋಂಕು ನಿವಾರಕ ಸಿಂಪಡಣೆಯಲ್ಲಿ ತೊಡಗಿಸಿಕೊಂಡಿದೆ. ಏಕಕಾಲದಲ್ಲಿ ವಿಸ್ತಾರವಾದ ಪ್ರದೇಶಗಳಿಗೆ ಸೋಂಕುನಿವಾರಕ ಸಿಂಪಡಣೆಗೆ ದಕ್ಷ ಡ್ರೋನ್​ ಬಳಸಿಕೊಳ್ಳಲಾಗುತ್ತಿದೆ. ಇದೀಗ ಅದೇ ದಕ್ಷ ಕರ್ನಾಟಕದಲ್ಲೂ ಬಳಕೆ ಮಾಡಲಾಗುತ್ತಿದ್ದು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಅದರ ತಯಾರಿಕೆಯ ಹಿಂದಿರುವ ಅಜಿತ್​ ಕಾರ್ಯವನ್ನು ಟ್ವಿಟರ್​ನಲ್ಲಿ ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ತಿರುನೆಲ್​ವೆಲ್ಲಿ ಜಿಲ್ಲಾಧಿಕಾರಿ ದಕ್ಷ ಡ್ರೋನ್​ಗಳನ್ನು ಬಳಸಿಕೊಂಡು ಒಂದಷ್ಟು ಪ್ರದೇಶಗಳಿಗೆ ಸ್ಯಾನಿಟೈಸ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts