More

    ರಾಜ್ಯದಲ್ಲಿಂದು 1,639 ಕರೊನಾ ಕೇಸ್ ಪತ್ತೆ; ಬೀದರ್ & ಯಾದಗಿರಿಯಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ಕರ್ನಾಟಕದಲ್ಲಿ ಬುಧವಾರದಂದು 1,639 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,88,341ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 36 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36,262ಕ್ಕೆ ಹೆಚ್ಚಿದೆ.

    ಇಂದು ಒಟ್ಟು 2,241 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 28,26,411 ಗುಣಮುಖರಾಗಿದ್ದು, 25,645 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.07ರಷ್ಟಿದ್ದರೆ ಕರೊನಾ ಮರಣ ಪ್ರಮಾಣ ಶೇ. 2.19 ರಷ್ಟಿದೆ.

    ಬೆಂಗಳೂರು ನಗರ ಜಿಲ್ಲೆಯಲ್ಲಿ 419 419 ಪ್ರಕರಣಗಳು ಕಾಣಿಸಿಕೊಂಡಿವೆ. ದಕ್ಷಿಣ ಕನ್ನಡದಲ್ಲಿ 190, ಮೈಸೂರಿನಲ್ಲಿ 160, ಹಾಸನ 141, ಉಡುಪಿಯಲ್ಲಿ 104 ಪ್ರಕರಣಗಳು ದೃಢವಾಗಿವೆ. ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರದಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೀದರ್ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

    ದೇಶದಲ್ಲಿ ಕರೊನಾದಿಂದಾಗಿ ಸತ್ತಿದ್ದು 4 ಲಕ್ಷವಲ್ಲ, 49 ಲಕ್ಷ ಜನರು! ಅಘಾತಕಾರಿ ವರದಿ ಬಿಡುಗಡೆ

    ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರೇಮ್ ಶುಕ್ಲಾ ಮತ್ತು ಶಾಜಿಯಾ ಇಲ್ಮಿ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts