More

    ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿಯನ್ನು ದಾಟಿಯೇ ಬಿಟ್ಟಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯದಲ್ಲಿ 45 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಈವರೆಗಿನ ಸೋಂಕಿತರ ಸಂಖ್ಯೆ 1032 ಆಗಿದೆ.

    ಈ ಪೈಕಿ 476 ಮಂದಿ ಇದಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 520 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಈವರೆಗೆ 35 ಮಂದಿಯ ಬಲಿ ಪಡೆದಿದೆ.

    ಇದನ್ನೂ ಓದಿ: ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಬ್ಯೂಟಿ ಕ್ವೀನ್-​ ಸ್ನೇಹಿತ ಸಮೇತ ಸೀದಾ ಕ್ವಾರಂಟೈನ್​ಗೆ ಒಯ್ದ ಪೊಲೀಸರು!

    ಆತಂಕದ ಬೆಳವಣಿಗೆಯಲ್ಲಿ ದುಬೈನಿಂದ ವಾಪಸಾಗಿರುವವರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಮಂದಿಯಲ್ಲಿ ಹಾಗೂ ಉಡುಪಿಯಲ್ಲಿ ಐದು ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇನ್ನೊಂದೆಡೆ 653ನೇ ಸಂಖ್ಯೆಯ ಸೋಂಕಿತನಿಂದ 11 ಮಂದಿ ಬೆಂಗಳೂರಿಗರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ವರದಿಯಾಗಿರುವ ಪ್ರಕರಣಗಳ ಪೈಕಿ ಮುಂಬೈ ಹಾಗೂ ಚೆನ್ನೈನಿಂದ ಕರ್ನಾಟಕಕ್ಕೆ ಬಂದಿರುವ ವ್ಯಕ್ತಿಗಳಲ್ಲಿಯೂ ಸೋಂಕು ಹೆಚ್ಚಿನ ರೀತಿಯಲ್ಲಿ ಪತ್ತೆಯಾಗಿದೆ. ಮುಂಬೈನಿಂದ ಹಾಸನಕ್ಕೆ ಬಂದಿರುವ ಮೂವರಲ್ಲಿ, ಶಿವಮೊಗ್ಗದಲ್ಲಿ ಬಂದಿರುವ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚೆನ್ನೈನಿಂದ ಕೋಲಾರಕ್ಕೆ ಬಂದಿರುವ ಒಬ್ಬ ವ್ಯಕ್ತಿಯಲ್ಲಿ ಚಿತ್ರದುರ್ಗಕ್ಕೆ ಬಂದಿರುವ ಇಬ್ಬರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದೆ.

    ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘನೆ: ಜೇಬಿಗೆ ಬೀಳಲಿದೆ ಭಾರಿ ಕತ್ತರಿ- ಒಂಬತ್ತು ಕೋಟಿ ರೂ. ದಂಡ ವಸೂಲಿ!

    ಇದನ್ನು ಹೊರತುಪಡಿಸಿದರೆ ಬೆಂಗಳೂರು ನಗರದಲ್ಲಿ 2, ಬೀದರ್​ನಲ್ಲಿ 3, ಬಾಗಲಕೋಟೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

    ಹೆಚ್ಚಿನ ವಿವರ ಇಲ್ಲಿದೆ:

    ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು! ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts