More

    ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆ ಆಗತ್ತಾ? ಏನಂತಾರೆ ಸಿಎಂ?

    ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಆಸಕ್ತಿ ಹೊಂದಿದ್ದು, ಬೆಳಗಾವಿ ಸಭೆಗಳತ್ತ ಆಕಾಂಕ್ಷಿಗಳು ಚಿತ್ತ ನೆಟ್ಟಿದ್ದಾರೆ. ಮಹತ್ವದ ಮಸೂದೆ, ವಿಷಯಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಪ್ರತಿಪಕ್ಷಗಳ ಸವಾಲು ಸಮರ್ಥವಾಗಿ ನಿಭಾಯಿಸಲು ಹುರುಪುಳ್ಳ ತಂಡವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಒತ್ತಡ ಮುಕ್ತವಾಗಿ ಅಧಿವೇಶನ ಎದುರಿಸಬೇಕು ಎನ್ನುವುದು ಬಿಎಸ್​ವೈ ಆಸಕ್ತಿ ಹಿಂದಿರುವ ಲೆಕ್ಕಾಚಾರ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

    ಸೋಮವಾರದಿಂದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುಂಚೆ ಮಂತ್ರಿ ಮಾಡಿ ಎಂದು ಹಲವರು ಒತ್ತಡ ಹೇರಿದ್ದು, ವಿಳಂಬಕ್ಕೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿವೇಶನ, ಗ್ರಾಪಂ ಚುನಾವಣೆ ಬಳಿಕ ಬಿಬಿಎಂಪಿ, ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಘೋಷಣೆ ಸಾಧ್ಯತೆಗಳಿವೆ. ಇದರಿಂದಾಗಿ ಮತ್ತೆರಡು ತಿಂಗಳು ಕಾದು ಕುಳಿತುಕೊಳ್ಳಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ವರಿಷ್ಠರನ್ನು ಒಪ್ಪಿಸಿ ಎಂದು ಬಿಎಸ್​ವೈಗೆ ಕೆಲವು ಶಾಸಕರು ದುಂಬಾಲು ಬಿದ್ದಿದ್ದಾರೆ.

    ಪಕ್ಷದ ರಾಜ್ಯ ನೂತನ ಉಸ್ತುವಾರಿ ಹಾಗೂ ಸಂಸದ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಸಚಿವ ಸಂಪುಟ ವಿಚಾರದಲ್ಲಿ ಸ್ಪಷ್ಟತೆ ಸಿಗಲಿದೆ. ಬೆಳಗಾವಿಯಲ್ಲಿ ಡಿ.4ರಂದು ಪಕ್ಷದ ಕೋರ್ ಕಮಿಟಿ, ಡಿ.5ರಂದು ರಾಜ್ಯ ಕಾರ್ಯಕಾರಿಣಿ ಸಭೆಗಳಲ್ಲಿ ಅರುಣ್ ಸಿಂಗ್ ಪಾಲ್ಗೊಳ್ಳಲಿದ್ದು, ಉಸ್ತುವಾರಿಯಾದ ಬಳಿಕ ಮೊದಲ ಭೇಟಿ ಇದಾಗಿದೆ. ಗ್ರಾಪಂ ಚುನಾವಣೆ, ಅಧಿವೇಶನ ತಲೆ ಮೇಲೆ ಇಟ್ಟುಕೊಂಡು ಸಂಪುಟ ವಿಸ್ತರಣೆಗೆ ಕೈಹಾಕಿದರೆ ಅನಗತ್ಯವೆಂಬ ಗೊಂದಲ ಸೃಷ್ಟಿಯಾಗುವ ಆತಂಕವಿದೆ. ಇದೇ ಕಾರಣಕ್ಕೆ ವರಿಷ್ಠರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ದೆಹಲಿ ಹಿರಿಯ ನಾಯಕರು ಈ ನಿಲುವು ಬದಲಿಸಿಕೊಂಡಿದ್ದಾರೆಯೆ? ಎನ್ನುವುದು ಖಚಿತಪಟ್ಟಿಲ್ಲವೆಂದು ಮೂಲಗಳು ತಿಳಿಸಿವೆ.

    ಸೂಚನೆ ಕುತೂಹಲ: ರಾಜ್ಯಕ್ಕೆ ಅರುಣ್ ಸಿಂಗ್ ಬರಿಗೈಯಲ್ಲಂತೂ ಬರುವುದಿಲ್ಲ. ವರಿಷ್ಠರ ಹಲವು ಸೂಚನೆಗಳ ಜತೆ ಆಗಮಿಸಿ, ಬೆಳಗಾವಿ ಸಭೆಯಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಯಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಷಯವೂ ಸೂಚನೆಗಳಲ್ಲಿ ಸೇರಿರಲಿದೆ. ಇಲ್ಲವೇ ಬಿಎಸ್​ವೈ ಸ್ವತಃ ರ್ಚಚಿಸಿ ಒಪ್ಪಿಗೆ ಪಡೆಯಲಿದ್ದಾರೆ ಎಂದು ರ್ತಸಲಾಗು ತ್ತಿದೆ. ನಿಗಮ- ಮಂಡಳಿಗಳಿಗೆ ಕೆಲವು ಶಾಸಕರನ್ನು ನೇಮಿಸಿಯಾಗಿದೆ. ಪೈಪೋಟಿಯಲ್ಲಿದ್ದ ಆಕಾಂಕ್ಷಿಗಳ ಸಂಖ್ಯೆ ತಗ್ಗಿದ್ದು, ಇದೆಲ್ಲವನ್ನು ಗಮನಿಸಿರುವ ವರಿಷ್ಠರು ಸಮ್ಮತಿಸಿದರೂ ಅಧಿವೇಶನಕ್ಕೆ ಮುನ್ನವೇ ಸಂಪುಟ ಸಂಕಟ ಬಗೆಹರಿಯುತ್ತದೆ ಎಂಬ ಖಾತರಿಯಿಲ್ಲ ಎನ್ನಲಾಗುತ್ತದೆ.

    ವೈಯಕ್ತಿಕವಾಗಿ ನೋವು ಆದಾಗ ಕೆಲವರು ಭಾವಾವೇಶದಲ್ಲಿ ಮಾತನಾಡುವುದು ಸಹಜ. ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅವರು ಅದೇ ರೀತಿ ಮಾತನಾಡಿರಬಹುದು. ಆದರೆ ಅವರು ಒಂಟಿಯಲ್ಲ. ಮುಖ್ಯಮಂತ್ರಿ ಸಹಿತ ನಾವು ಹದಿನೇಳು ಮಂದಿಯೂ ಅವರ ಜತೆಗಿದ್ದೇವೆ. ನಾವೆಲ್ಲರೂ ಈಗ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಅವರನ್ನು ಏಕಾಂಗಿ ಯಾಗಿಸುವ ಪ್ರಶ್ನೆಯೇ ಇಲ್ಲ.

    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts