More

    ಕಾಂಗ್ರೆಸ್​ ಮುರಾಬಟ್ಟೆಯಾಗುತ್ತಿದೆ, ಕನಕಪುರದ ಬಂಡೆಯಿಂದ ಏನೂ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ; ಜಗದೀಶ್​ ಶೆಟ್ಟರ್​

    ಹುಬ್ಬಳ್ಳಿ: ರಾಜ್ಯದಲ್ಲಿನ ಉಪಚುನಾವಣೆಯಲ್ಲಿ ಜನರು ಬಿಜೆಪಿ ಕೈ ಹಿಡಿದಿದ್ದಾರೆ. ಶಿರಾ ಮತ್ತು ಆರ್​.ಆರ್​.ನಗರ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಪಕ್ಷ ಇದೀಗ ಸಂಭ್ರಮದ ಅಲೆಯಲ್ಲಿದೆ. ಜನರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ, ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂದು ಬಿಜೆಪಿ ನಾಯಕ ಜಗದೀಶ್​ ಶೆಟ್ಟರ್​ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಉಪಚುನಾವಣೆ ಸೋಲಿನ ಬಳಿಕ ಕುಸುಮಾ ಮೊದಲ ಪ್ರತಿಕ್ರಿಯೆ ಹೀಗಿದೆ…

    “ಶಿರಾ ಮತ್ತು ಆರ್.ಆರ್.‌ನಗರ ಕ್ಷೇತ್ರದ ಜನ ನಮ್ಮ ಕೈಹಿಡಿದಿದ್ದಾರೆ. ಪಕ್ಷದ ಮೇಲೆ ನಂಬಿಕೆ ಇಟ್ಟು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಕರ್ನಾಟಕದ ಜನತೆಯ ಆಶೀರ್ವಾದ ಬಿಜೆಪಿಯ ಹಾಗೂ ನಮ್ಮ ಸರ್ಕಾರದ ಮೇಲಿದೆ.” ಎಂದು ಅವರು ಹೇಳಿದ್ದಾರೆ. ಅದರ ಜತೆಯಲ್ಲಿ ಬಿಹಾರ ಚುನಾವಣೆಯ ಬಗ್ಗೆಯೂ ಮಾತನಾಡಿರುವ ಅವರು, “ಬಿಹಾರದ ಚುನಾವಣೆ ಸಿ ವೋಟರ್ ಸಮೀಕ್ಷೆಯ ಪ್ರಕಾ ಮಹಾಘಟಬಂಧನ ಗೆಲ್ಲುತ್ತದೆ ಎನ್ನಲಾಗಿತ್ತು, ಅದು ಸುಳ್ಳಾಗಿದೆ. ಬಿಹಾರದ ಜನತೆ ಮೋದಿಯವರ ಮೇಲೆ ಇರುವ ವಿಶ್ವಾಸವನ್ನ ತೋರ್ಪಡಿಸಿದ್ದಾರೆ. ನಿತೀಶ್​ ಕುಮಾರ ಅವರ ಜತೆ ನಾವಿದ್ದೇವೆಂದು ತೋರಿಸಿಕೊಟ್ಟಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್ ಅಧೋಗತಿಗೆ ಹೋಗುತ್ತಾ ಇದೆ” ಎಂದು ನುಡಿದಿದ್ದಾರೆ.

    ಇದನ್ನೂ ಓದಿ: ಲಾರಿ-ಕಾರು ನಡುವೆ ಅಪಘಾತ: ಸಚಿವ ಜಗದೀಶ್ ಶೆಟ್ಟರ್ ಪುತ್ರ, ಸೊಸೆ ಆಸ್ಪತ್ರೆಗೆ ದಾಖಲು
    ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಕಾಂಗ್ರೆಸ್‌ ಪಕ್ಷವನ್ನ ಉದ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಕನಕಪುರದ ಬಂಡೆಗೆ ಉಪ ಚುನಾವಣೆಯಲ್ಲಿ ಏನೂ ಮಾಡಲಿಕ್ಕೆ ಆಗಲಿಲ್ಲ. ಬಿಜೆಪಿ ಬಹಳಷ್ಟು ಬಲಾಢ್ಯವಾಗಿ ಬೆಳೆದಿದೆ. ಬಿಜೆಪಿಗೆ ಮೈಸೂರು ಭಾಗದಲ್ಲಿ ಬೇಸ್ ಇರ್ಲಿಲ್ಲ‌. ಈಗ ನಮ್ಮ ಪಕ್ಷ ಅಲ್ಲಿಯೂ ಸ್ಟ್ರಾಂಗ್ ಆಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಮುರಾಬಟ್ಟೆ ಆಗುತ್ತಿದೆ ಎಂದು ಅವರು ಹೀಯಾಳಿಸಿದ್ದಾರೆ.

    ಕ್ಯಾಬ್​ ಹತ್ತಿದ ಆ ಮೂವರು ಹೀಗಾ ಮಾಡೋದು? ಚಾಲಕರೇ ಹುಷಾರಪ್ಪಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts