ಬಾಗಿಲು ತೆರೆದಿದ್ದ ಅಂಗಡಿ ಮುಂದೆ ಸಾಷ್ಟಾಂಗ ನಮಸ್ಕಾರ..!

1 Min Read
blank

ಚಾಮರಾಜನಗರ: ಬಂದ್ ಗೆ ಕರೆ ನೀಡಿದ್ದರೂ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಅಂಗಡಿ ಮುಂದೆ ಕನ್ನಡ ಪರ ಹೋರಾಟಗಾರ ನಿಜಧ್ವನಿ ಗೋವಿಂದ ರಾಜು ಸಾಷ್ಟಾಂಗ ನಮಸ್ಕಾರ ಹಾಕಿ ಬಾಗಿಲು ಮುಚ್ಚಲು ಮನವಿ ಮಾಡಿದರು.

ಪ್ರತಿಭಟನಾಕಾರರ ಕೋರಿಕೆ ಮೇರೆಗೆ ಅಂಗಡಿ ಬಾಗಿಲು ಹಾಕಲಾಯಿತು. ನಗರದಲ್ಲಿ ಬೈಕ್‌ ರ್ಯಾಲಿ ನಡೆಸುತ್ತಿರುವ ರೈತರು ತೆರೆದಿದ್ದ ಅಂಗಡಿಗಳ ಮುಚ್ಚಿಸುತ್ತಿದ್ದಾರೆ‌. ನಗರದ ಸಂತೇಮರಳ್ಳಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಅನ್ನು ಮುಚ್ಚಲು ಕೈ ಮುಗಿದು ಕೋರಲಾಯಿತು.

ಅಗತ್ಯ ಸೇವೆಯಲ್ಲಿ ಪೆಟ್ರೋಲ್ ಬಂಕ್ ಸಹ ಒಂದು. ಆದ್ದರಿಂದ ಬಲವಂತ ಮಾಡದಂತೆ ಪೊಲೀಸರು ತಿಳಿಸಿದರು. ಬಳಿಕ‌ ಪೆಟ್ರೋಲ್ ಬಂಕ್ ನಿಂದ ರೈತರು ತೆರಳಿದರು.

ಕರ್ನಾಟಕ ಬಂದ್: ವಿವಿಧೆಡೆ ಬೆಳಗ್ಗಿನ ಸನ್ನಿವೇಶ ಹೀಗಿದೆ ನೋಡಿ..

Share This Article