More

    Karnataka Assembly Election; ಮಾಧ್ಯಮ ಮಿತ್ರರಿಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ 2023ರ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ 2023ರ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರಿಗಾಗಿ ಮತದಾನದ ವಿಷಯದ ಬಗ್ಗೆ, ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

    ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ಮತದಾನ ಮೇ 10 ರಂದು ನಿಗದಿಯಾಗಿದ್ದು, ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಶಂಸಿವುದರ ಜತೆಗೆ ತನ್ನ ವರದಿ ಹಾಗೂ ಪುಸ್ತಕಗಳ ಮುಖವುಟಗಳಲ್ಲಿ ಬಳಸಿಕೊಂಡಿದೆ.

    ಇದನ್ನೂ ಓದಿ: ಸೇತುವೆಗೆ ಬಿದ್ದ ಬಸ್​​; 14 ಮಂದಿ ಪ್ರಯಾಣಿಕರು ಮೃತ್ಯು, ಹಲವು ಜನ ಗಂಭೀರ

    ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ನಿಮಿತ್ತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತಿದೆ.

    ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಈ ನಿಯಮಗಳು ಅನ್ವಯವಾಗಿಲಿವೆ:

    ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಪತ್ರಿಕಾ ಛಾಯಾಗ್ರಾಹಕರು/ಹವ್ಯಾಸಿ ಛಾಯಾಗ್ರಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಸೂಕ್ತ ಶೀರ್ಷಿಕೆ ನೀಡಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಅಕ್ರಿಡಿಟೇಷನ್​​ ಕಾರ್ಡ್ ಅಥವಾ ತಮ್ಮ ಮಾಧ್ಯಮ ಕಚೇರಿ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಹಾಗೂ ಮನ ವಿಳಾಸ, ಮೊಬೈಲ್‌ ಸಂಖ್ಯೆ ಸೇರಿದಂತೆ ಮತ್ತಿತರ ವಿವರಗಳನ್ನು ಇ-ಮೇಲ್ ಐಡಿ ktkcompel [email protected] ಸಲ್ಲಿಸುವುದು. 2023 ಮೇ 20ರಂದು ಶನಿವಾರ ಸಂಜೆ 5 ಗಂಟೆಯೊಳಗೆ ಇ ಮೇಲ್ ಮೂಲಕ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ.

    ಇದನ್ನೂ ಓದಿ: ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?

    ಬಹುಮಾನಗಳ ವಿವರ:

    ಪ್ರಥಮ ಬಹುಮಾನ 25,000 ರೂ., ದ್ವಿತೀಯ ಬಹುಮಾನ 15,000 ರೂ., ತೃತೀಯ ಬಹುಮಾನ 10,000ರೂ, ಸಾಮಾಧಾನಕರ ಬಹುಮಾನ 6,000 ರೂ., ವಿಶೇಷ ಬಹುಮಾನ 5,000ರೂ. ಆಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಒಟ್ಟು 61 ಸಾವಿರ ರೂ.ಗಳನ್ನು ಬಹುಮಾನದ ಮೊತ್ತಕ್ಕೆ ವ್ಯಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts