More

    ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ರೈಲ್ವೇಸ್ ನಿರ್ಣಾಯಕ ಹಣಾಹಣಿ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು
    ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಲೈಟ್ ಸಿ ಗುಂಪಿನ ಲೀಗ್ ಹಂತದ ತನ್ನ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಕರ್ನಾಟಕ ತಂಡದ ಪಾಲಿಗೆ ಮಹತ್ವ ಪಡೆದಿದೆ. ಹ್ಯಾಟ್ರಿಕ್ ಗೆಲುವು ದಾಖಲಿಸಿ ಉತ್ತಮ ರನ್‌ರೇಟ್ ಹೊಂದಿರುವ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ಎದುರು ವಿಜೆಡಿ ನಿಯಮದನ್ವಯ 9 ರನ್‌ನಿಂದ ಸೋತ ಬಳಿಕ ಕರ್ನಾಟಕ ತಂಡ, ಬಿಹಾರ, ಒಡಿಶಾ ಹಾಗೂ ಕೇರಳ ಎದುರು ಭರ್ಜರಿ ಜಯ ದಾಖಲಿಸಿದೆ.

    ಉತ್ತಮ ರನ್‌ರೇಟ್ ಹೊಂದಿದ್ದರೂ ಎಂಟರಘಟ್ಟಕ್ಕೇರಲು ಕಡೇ ಪಂದ್ಯದಲ್ಲಿ ರೈಲ್ವೇಸ್ ಎದುರು ಕರ್ನಾಟಕ ತಂಡ ಗೆಲುವು ಅನಿವಾರ್ಯವಾಗಿದೆ. ಗೆಲುವು ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ೈನಲ್ ಪ್ರವೇಶಿಸಲಿದೆ. ಆರಂಭಿಕರಾದ ನಾಯಕ ಆರ್.ಸಮರ್ಥ್ ಹಾಗೂ ದೇವದತ್ ಪಡಿಕಲ್ ಜೋಡಿ ಉತ್ತಮ ಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಪಡಿಕಲ್ ಸತತ ಎರಡು ಶತಕ ಸಿಡಿಸಿದ್ದರೆ, ಸಮರ್ಥ್ ಶತಕ ಹಾಗೂ ಸತತ 2 ಅರ್ಧಶತಕ ಬಾರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕೆವಿ ಸಿದ್ಧಾರ್ಥ್ ಆಸರೆಯಾಗುತ್ತಿದ್ದಾರೆ.

    ಅನುಭವಿ ಎ.ಮಿಥುನ್, ಪ್ರಸಿದ್ಧ್ ಕೃಷ್ಣ, ಸ್ಪಿನ್ನರ್‌ಗಳಾದ ಜೆ.ಸುಚಿತ್, ಶ್ರೇಯಸ್ ಗೋಪಾಲ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ. ಮತ್ತೊಂದೆಡೆ, ರೈಲ್ವೇಸ್ ತಂಡ, ಲೀಗ್‌ನಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳಿಂದ ತಲಾ 2 ಗೆಲುವು, ಸೋಲು ಕಂಡಿದ್ದು ಈಗಾಗಲೇ ಎಂಟರಘಟ್ಟದ ರೇಸ್‌ನಿಂದ ಹೊರಬಿದ್ದಿದೆ.

    ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ
    ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts