More

    ಡಾ. ಅಜಿತ ಪ್ರಸಾದ ಆಶಯ; ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯಲಿ

    ಧಾರವಾಡ: ಕೇವಲ ಅಂಕ ಗಳಿಕೆಯಿಂದ ಮಕ್ಕಳು ಜಾಣರಾಗಲಾರರು. ಅಂಕಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಭಾಗವಹಿಸಬೇಕು. ಅಂದಾಗ ಮಾತ್ರ ಶಿಕ್ಷಣ ಎಂಬುದು ಪರಿಪೂರ್ಣವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯಬೇಕು ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಹೇಳಿದರು.
    ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಲಭಿಸಿದ ಕರ್ನಾಟಕ ಅಚೀವರ‍್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿ ನಾವು ಕಲಿಸುವ ಸಂಸ್ಕಾರಗಳನ್ನು ಮಕ್ಕಳು ಕಲಿಯುತ್ತಾರೆ. ಪಾಲಕರು ಮಕ್ಕಳ ಲಾಲನೆ ಪಾಲನೆಗಾಗಿ ಸಮಯ ಮೀಸಲಿಡುವುದು ಅವಶ್ಯಕ. ಮಕ್ಕಳಲ್ಲಿ ಮಾನವಿಯತೆಯ ಮೌಲ್ಯ, ನಾಯಕತ್ವ ಗುಣಗಳನ್ನು ಬೆಳೆಸಬೇಕು ಎಂದರು.
    ಧರ್ಮಸ್ಥಳದ ಧರ್ಮಾಽಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪತ್ನಿ ಡಾ. ಹೇಮಾವತಿ ಹೆಗ್ಗಡೆಯವರು ಬರೆದ ಮಗಳಿಗೊಂದು ಪತ್ರ ಪುಸ್ತಕದ ಆಯ್ದ ಭಾಗಗಳನ್ನು ಹೆಣ್ಣು ಮಕ್ಕಳ ಪಾಲಕರು ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿ ಓದಿದ ಸಂದರ್ಭ ಲಭಿಸಿದ ಕರ್ನಾಟಕ ಅಚೀವರ‍್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಪ್ರಾಚಾರ್ಯೆ ಉಷಾ ಸಂತೋಷ ಅವರಿಗೆ ಹಸ್ತಾಂತರಿಸಿದರು.
    ಜೆ.ಎಸ್.ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಪ್ರಾಚಾರ್ಯೆ ಉಷಾ ಸಂತೋಷ್, ಸಹ ಸಂಯೋಜಕರಾದ ನಿರ್ಮಲಾ ಪಾಟೀಲ, ಸಾವಿತ್ರಿ ಗಾತಾಡೆ ಹಾಗೂ ಕಮಲಾಕ್ಷಿ ಸಣ್ಣಕ್ಕಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts