More

    ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ಶಾರದಾ ಮೆಮೋರಿಯಲ್​ ಟ್ರಸ್ಟ್​ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ನಗರದ ಮುನ್ಸಿಪಲ್​ ಮೈದಾನದಲ್ಲಿ ಭಾನುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
    ಮುರಗೇಶ ಶೆಟ್ಟರ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಕಲಾವಿದರಿಗೆ ಪ್ರೊತ್ಸಾಹ ಸಿಗುತ್ತದೆ. ಅವಕಾಶಗಳನ್ನು ಮಕ್ಕಳು ಸದ್ಭಳಕೆ ಮಾಡಿಕೊಲ್ಳಬೇಕು. ನಶಿಸಿ ಹೋಗುತ್ತಿರುವ ಕಲೆಗಳನ್ನು ಪ್ರದರ್ಶನ ಮಾಡಲು ಅವಕಾಶ ನೀಡಿರುವದು ಶ್ಲಾನೀಯ ಎಂದರು.
    ಉಷಾ ಮಹೇಶ ದಾಸರ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಇತರೆ ಕಲಾಭಿರುಚಿವುಳ್ಳ ಮಕ್ಕಳು ಇಂತಹ ಕಲೆಗಳನ್ನು ಕಲಿಯುವುದು ಅವಶ್ಯಕವಾಗಿದೆ ಎಂದರು.
    ನಗರಸಭೆ ಸದಸ್ಯ ಮುತ್ತಣ್ಣ ಮುಶೀಗೇರಿ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಇಂತಹ ಸಾಂಸತಿಗಳು ಜರುಗುವುದರಿಂದ ಮಾನಸಿಕ ನೆಮ್ಮದಿ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದ ಎಂದರು.
    ಕಾರ್ಯಕ್ರಮದಲ್ಲಿ ವಿವಿಧ ಸಾಂಸತಿಕ ಕಾರ್ಯಕ್ರಮ ಜರುಗಿದವು. ಜುಟ್ಟು ಬಾಬು ನಾಟಕ ಪ್ರದರ್ಶನವಾಯಿತು. ಸಮೂಹ ನೃತ್ಯ, ಲಂಬಾಣಿ ನೃತ್ಯ ಜರುಗಿದವರು.
    ವೇದಿಕೆಯ ಮೇಲೆ ರೋಟರಿ ಕ್ಲಬ್​ ಅಧ್ಯ ವಿಜಯಕುಮಾರ ಹಿರೇಮಠ, ಸೋಮಶೇಖರ ಚಿಕ್ಕಮಠ, ಸ್ನೇಹಾ ವಿಜಯಕುಮಾರ, ದ ಗರಗ, ಡಾ. ಮಹೇಶ ಕುಂದ್ರಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts