More

    ಕೊನೆಗೂ ವಿಕಿಪೀಡಿಯಾ ಕೈಗೆ ಸಿಕ್ಕ ಕರಿಮಣಿ ಮಾಲೀಕ; ನೀನಲ್ಲ ನೀನಲ್ಲಾ.. ರಾವುಲ್ಲಾ..ರಾವುಲ್ಲಾ..ಕರಿಮಣಿ ಮಾಲೀಕ ರಾವುಲ್ಲಾ..!

    ಸೋಷಿಯಲ್​ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಕರಿಮಣಿ ಮಾಲೀಕ ಹಾಡಿನ ರೀಲ್ಸ್,​ ವಿಡಿಯೋಗಳು ವೈರಲ್​ ಆಗುತ್ತಲೇ ಇದೆ. ಈ ಹಿಂದೆ ನಾನು ನಂದಿನಿ ಬೆಂಗಳೂರಿಗ್​ ಬಂದೀನಿ ರೀಲ್ಸ್​​ ಮೂಲಕ ವೈರಲ್​ ಆಗಿದ್ದ ವಿಕಿಪೀಡಿಯಾ ಅವರ ಮತ್ತೊಂದು ರೀಲ್ಸ್​​ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ಕರಿಮಣಿ ಮಾಲೀಕ ಯಾರು ಅನ್ನೋ ಪ್ರಶ್ನೆಗೆ ಇಲ್ಲಿ ನಂದಿನಿ ಉತ್ತರಿಸಿದ್ದಾರೆ. ಈ ಹಾಡಿನಲ್ಲಿ ಕರಿಮಿ ಮಾಲೀಕ ಯಾರು ಎಂದು ಇಬ್ಬರು ಕುಳಿತುಕೊಂಡು ನಂದಿನಿಗೆ ಪ್ರಶ್ನಿಸುತ್ತಾರೆ. ಆಗ ನಂದಿನಿ ನೀನಲ್ಲ ನೀನಲ್ಲಾ.. ರಾವುಲ್ಲಾ..ರಾವುಲ್ಲಾ..ಕರಿಮಣಿ ಮಾಲೀಕ ರಾವುಲ್ಲಾ ಎಂದು ಹೇಳಿದ್ದಾರೆ.

    ರಾವುಲ್ಲಾ ಅನ್ನೋ ಹೆಸರು ಬೆಳ್ಳುಳ್ಳಿ ಕಬಾಬ್ ಅಡುಗೆ ವಿಡಿಯೋದಿಂದ ಫೇಮಸ್​ ಆಗಿದ್ದು, ಇದೀಗ ಕರಿಮಣಿ ಮಾಲೀಕ ಅವರ ವಿಕಿಪೀಡಿಯಾ ರೀಲ್​​​ನಲ್ಲೂ ಬಳಸಿರೋದು ಜನರಲ್ಲಿ ಮತ್ತಷ್ಟು ನಗೆ ಹನಿಯನ್ನ ಮೂಡಿಸಿದೆ.

    ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಅಗುತ್ತಿದ್ದು, ನೆಟ್ಟಿಗರು ಕೊನೆಗೂ ಕರಿಮಣಿ ಮಾಲೀಕ ಯಾರು ಅನ್ನೋದು ಗೊತ್ತಾಯ್ತು, ಇದು ರಾಜ್ಯವೇ ಖುಷಿ ಪಡುವ ಸದ್ದಿ ಎಂದು ಕಾಮೆಂಟ್​​ ಮಾಡಿದ್ರೆ ಇನ್ನು ಹಲವರು ಕ್ಲೈಮ್ಯಾಕ್ಸ್​​ ಟ್ವಿಸ್ಟ್​​ ಸೂಪರ್​​ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

    ಕರಿಮಣಿ ಮಾಲೀಕ ಟ್ರೆಂಡಿಂಗ್ ಬ್ರೇಕ್ ಮಾಡಿದ ನಮ್ಮ ರಾಹುಲ್ಲ ಎಂದು ಇನ್ನೂ ಹಲವರು ಕಾಮೆಂಟ್​​ ಮಾಡಿದ್ರೆ, ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts