More

    ಕರಿಘಟ್ಟದಲ್ಲಿದೆ ಔಷಧೀಯ ಸಸ್ಯ ಸಂಪತ್ತು

    ಶ್ರೀರಂಗಪಟ್ಟಣ: ಪ್ರಸಿದ್ಧ ಕರಿಘಟ್ಟ ಬೆಟ್ಟ ಪೌರಾಣಿಕ ಮಹತ್ವ ಹಾಗೂ ಪಾಕೃತಿಕ ಸೌಂದರ್ಯ ಮಾತ್ರವಲ್ಲ ಇಲ್ಲಿರುವ ಅಪರೂಪದ ಔಷಧೀಯ ಗುಣವುಳ್ಳ ಸಸ್ಯಗಳ ನೆಲೆಯಾಗಿದ್ದು, ಇದರ ಸಂರಕ್ಷಣೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮೈಸೂರಿನ ಟೆರೇಷಿಯನ್ ಕಾಲೇಜಿನ ಸಸ್ಯಶಾಸ್ತ್ರಜ್ಞ ಡಾ.ವಿನಯ್ ರಾಘವೇಂದ್ರ ತಿಳಿಸಿದರು.

    ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಬುಧವಾರ ಮೈಸೂರಿನ ಕ್ರಿಯಾ ಪರಿಸರ ಸಂಸ್ಥೆ, ಟೆರೇಷಿಯನ್ ಕಾಲೇಜು ವಿದ್ಯಾರ್ಥಿಗಳು, ಹಸಿರು ಸೈನ್ಯದೊಂದಿಗೆ ಹಾಗೂ ಪರಿಸರ ರಮೇಶ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಔಷಧೀಯ ಸಸ್ಯಗಳು ಮತ್ತು ಇತರ ಜೀವವೈವಿಧ್ಯ ಅರಿವು ಶಿಬಿರದಲ್ಲಿ ಮಾತನಾಡಿದರು.

    ನೀಲಾಕಾಶದಲ್ಲಿ ತೇಲುತಾ ಹನುಮಂತ ಹೊತ್ತೊಯ್ಯುತ್ತಿದ್ದ ಸಂಜೀವಿನಿ ಪರ್ವತದ ಒಂದು ಸಣ್ಣ ಭಾಗವು ಅಚಾನಕ್ ಭೂಮಿಗೆ ಬಿದ್ದ ಸ್ಥಳವೇ ಕರಿಘಟ್ಟ ಎಂಬ ಪೌರಾಣಿಕ ಕಥೆಗಳು ಈ ಬೆಟ್ಟಕ್ಕಿದೆ. ಅದೇನೇ ಇರಲಿ ಕರಿಘಟ್ಟ ಬೆಟ್ಟ ಪೌರಾಣಿಕ ಮಹತ್ವ ಮತ್ತು ಪಾಕೃತಿಕ ಸಿರಿ ಸಂಪತ್ತಿನ ತಾಣ ಮಾತ್ರವಲ್ಲ, ಈ ಬೆಟ್ಟದಲ್ಲಿ ಅಪರೂಪವಾಗಿ ಕಂಡು ಬಂದ 15 ಬಗೆಯ ಔಷಧಿಯುಕ್ತ ಆಯುರ್ವೇದ ಗಿಡ ಮೂಲಿಕೆಗಳನ್ನು ಪ್ರಸ್ತುತ ಗುರುತಿಸಿ ನಮ್ಮ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇವುಗಳ ಸರಿಯಾದ ಅಧ್ಯಯನ ಹಾಗೂ ಸೂಕ್ತ ಮಾಹಿತಿಗಳ ಪಟ್ಟಿ ಸಿದ್ಧಪಡಿಸಿದ ಬಳಿಕ ಈ ಬೆಟ್ಟದ ಪರಿಸರದ 5 ಎಕರೆ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಔಷಧೀಯ ಸಸ್ಯಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆಯಲು ವಿಶ್ವವಿದ್ಯಾಲಯದ ವತಿಯಿಂದ ಗಮನಸೆಳೆದು ಒತ್ತಾಯಿಸಲಾಗುವುದು. ಈ ಬೆಟ್ಟದಲ್ಲಿ ಸಸ್ಯಗಳ ಪೋಷಣೆಯಲ್ಲಿ ನಿರತರಾಗಿರುವ ಪರಿಸರ ರಮೇಶ್ ಹಾಗೂ ಅರಣ್ಯ ಇಲಾಖೆ ಕಾರ್ಯ ಶ್ಲಾಘನೀಯ ಎಂದರು.

    ಶ್ರಮದಾನ: ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮೈಸೂರಿನ ಪ್ರೊ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಟೆರೇಷಿಯನ್ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಸಿರು ಸೈನ್ಯದ 16 ಮಕ್ಕಳು ಹಾಗೂ ಕ್ರಿಯಾ ಪರಿಸರ ಸಂಸ್ಥೆಯ ಸದಸ್ಯರು ಕರಿಘಟ್ಟ ಬೆಟ್ಟದಲ್ಲಿ ನೆಡಲಾಗಿರುವ ಸಸ್ಯಗಳ ಕುರಿತು ಮಾಹಿತಿ ಪಡೆದು ಅವುಗಳ ಸುತ್ತಮುತ್ತ ಬೆಳೆದಿದ್ದ ಕಳೆ, ಮುಳ್ಳು ಕತ್ತರಿಸಿ ಪಾತಿ ಮಾಡಿ ನೀರುಣಿಸಿ ಸುಮಾರು 2 ತಾಸು ಶ್ರಮದಾನ ನಡೆಸಿದರು.
    ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಪ್ರೊ.ರೇಖಾ, ನಿಶಾಂತ್, ಆಶಾ, ತೃಪ್ತಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಸತೀಶ್, ಸಿಬ್ಬಂದಿ ರೇವಣ್ಣ, ಭೋಜ ಸೂರಿ, ತೌಸಿಫ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts