More

    ಕರಿಯಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

    ಲಿಂಗದಹಳ್ಳಿ: ಲಿಂಗದಹಳ್ಳಿ ಗ್ರಾಮ ದೇವತೆ ಕರಿಯಮ್ಮ ಮತ್ತು ಚಿಕ್ಕಮ್ಮ ದೇವಿಯವರ ಬಾನದ ಸೇವೆ ಜಾತ್ರೆ ಮತ್ತು ಬ್ರಹ್ಮ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
    20 ರಂದು ಬೆಳಗ್ಗೆ 5 ರಿಂದ 7.30 ರವರೆಗೆ ಬೇವಿನ ಸೀರೆ ಉಡಿಸುವ ಕಾರ್ಯಕ್ರಮ, ಮಧ್ಯಾಹ್ನ 2 ರಿಂದ 5ರ ವರೆಗೆ ಚಿಕ್ಕಮ್ಮ ದೇವಿ ಘಟೆ ಪೂಜೆ, ಸಂಜೆ 6 ರಿಂದ 8ರ ವರೆಗೆ ಶ್ರೀಕರಿಯಮ್ಮ ದೇವಿ ಮೂಲ ಸ್ಥಾನದಲ್ಲಿ ಬಲಿ ಹಾಕುವ ಕಾರ್ಯಕ್ರಮದ ನಂತರ ಅಭಿಷೇಕ , ಮಹಾಮಂಗಳಾರತಿ ನಡೆಯಲಿದೆ.
    21ರಂದು ಪೂರ್ಣ ಆಶ್ಲೇಷ ನಕ್ಷತ್ರದ ದಿನ ಬೆಳಗ್ಗೆ 9.30 ರಿಂದ 2 ಗಂಟೆಯವರೆಗಿನ ಶುಭ ಲಗ್ನದಲ್ಲಿ ಮಧುವಣಿಗ ಶಾಸ ಮಂಗಳಾರತಿ , ಪ್ರಸಾದ ವಿನಿಯೋಗ, 22 ರಂದು ಬೆಳಗ್ಗೆ 8ರಿಂದ 9.30ರ ವರೆಗೆ ಗೋಪೂಜೆ ಅಭಿಷೇಕ, ಕುಂಕುಮಾರ್ಚನೆಗಳ ನಂತರ ಮಹಾ ಚಂಡಿಕ ಯಾಗ ನಡೆಯಲಿದ್ದು ನಂತರ 12-30 ರಿಂದ 3-00 ಗಂಟೆಯವರೆಗೆ ಬ್ರಹ್ಮ ರಥೋತ್ಸವ , ಕಳಸರೋಹಣ, ನವಗ್ರಹ ಪೂಜೆ ಪೂರ್ಣಾಹುತಿ ಮಹಾ ಮಂಗಳಾರತಿ ನಡೆಯಲಿದೆ. ಸಂಜೆ 5ರಿಂದ 6 ಗಂಟೆಯವರೆಗೆ ಶ್ರೀ ಕರಿಯಮ್ಮ ದೇವಿ ಮತ್ತು ಚಿಕ್ಕಮ್ಮ ದೇವಿಯವರ ರಾಜಾ ಬೀದಿ ಉತ್ಸವಗಳೊಂದಿಗೆ ಶ್ರೀದೇವಿಯ ತವರು ಮನೆಯಾದ ಮಲ್ಲೇನಹಳ್ಳಿ ಗ್ರಾಮಕ್ಕೆ ಹೋಗುವ ಕಾರ್ಯಕ್ರಮ ನಡೆಯಲಿದೆ.
    23ರ ಶನಿವಾರ ಬೆಳಗ್ಗೆ 11 ರಿಂದ 12 ಗಂಟೆಯವರೆಗಿನ ಪೂರ್ವ ಫಲ್ಗುಣ ನಕ್ಷತ್ರದ ಶುಭ ಲಗ್ನದಲ್ಲಿ ಶ್ರೀ ಕರಿಯಮ್ಮ ದೇವಿಯನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ನಂತರ ಬಲಿಹಾಕುವುದು ಮತ್ತು ಶ್ರೀ ದೇವಿಯ ಬೆಳ್ಳಿ ಬಾವುಟದ ಬಹಿರಂಗ ಹಾರಾಜು ನಡೆಯಲಿದ್ದು, ಶ್ರೀದೇವಿಗೆ ಮಹಾ ಮಂಗಳಾರತಿ ನಡೆಸಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಶಾಸಕ ಜಿ.ಹೆಚ್.ಶ್ರೀನಿವಾಸ್, ಸಮಾಜ ಸೇವಕಿ ವಾಣಿ ಶ್ರೀನಿವಾಸ್, ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. 24ರಂದು ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಓಕುಳಿ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸರಿಯಾಗಿ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಚಿಕ್ಕಮ್ಮ ದೇವಿಯವರಿಗೆ ವಿಶೇಷ ದೀಪಾಲಂಕಾರಗಳೊಂದಿಗೆ ಕೂಡಿದ ವೈಭವ ಮೆರವಣಿಗೆ ಕಾರ್ಯಕ್ರಮ ಗ್ರಾಮದ ರಾಜ ಭೀದಿಗಳಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪದಾಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts