More

    ಕ್ಷೇತ್ರದಲ್ಲಿ ಅಭಿವೃದ್ಧಿ ತೋರಿಸಿದರೆ ರಾಜಕೀಯ ನಿವೃತ್ತಿಯಾಗುವುದಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು

    ಕಾರಟಗಿ: ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಶಾಸಕ ಬಸವರಾಜ ದಢೇಸುಗೂರು ಕ್ಷೇತ್ರ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ಮಹತ್ವದ ಯೋಜನೆ ಮತ್ತು ಪುರಸಭೆಗೆ ಒಂದು ರೂ. ಅನುದಾನ ತರಲಾಗಿಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

    ಪುರಸಭೆ ಚುನಾವಣೆ ನಿಮಿತ್ತ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಗುರುವಾರ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮಂಜೂರಾದ ಅನುದಾನದಿಂದ ಶಾಸಕರು ಭೂಮಿ ಪೂಜೆ ಮಾಡಿಕೊಂಡು ಓಡಾಡುತ್ತಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಎರಡು ತಾಲೂಕು, ಪಪಂ., ಪುರಸಭೆ, ಡಿಪ್ಲೋಮಾ ಕಾಲೇಜು, ಕುಡಿವ ನೀರು, ವಿಶೇಷ ಎಪಿಎಂಸಿ, ಉಪನೋಂದಣಿ ಕಚೇರಿ, ಕೆರೆ ತುಂಬಿಸುವ ಯೋಜನೆ, ರೈಸ್ ಟೆಕ್ನಾಲಜಿ ಪಾರ್ಕ್, ಏತ ನೀರಾವರಿ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಶಾಸಕ ದಢೇಸುಗೂರು ಇಲ್ಲಿಯವರೆಗೆ ಕ್ಷೇತ್ರಕ್ಕೆ ಒಂದೇ ಒಂದು ಮಹತ್ವದ ಯೋಜನೆ ಮತ್ತು ಅನುದಾನ ತಂದಿಲ್ಲ. ಹಾಗೊಂದು ವೇಳೆ ತಂದಿದ್ದರೆ ಶಾಸಕರು ತೋರಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ತಂಗಡಗಿ ಶಾಸಕರಿಗೆ ಸವಾಲು ಹಾಕಿದರು.

    15ನೇ ವಾರ್ಡ್ ಪುರಸಭೆ ಮಾಜಿ ಸದಸ್ಯೆ ಮಹಾಲಕ್ಷ್ಮೀಪತಿ ಸ್ವಪ್ರಕಾಶ ಹಿರೇಮಠ ಇದೇ ಸಂದರ್ಭ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಕವಡೇ ಪೀರ್ ದರ್ಗಾ, ಡಾ.ರಾಜ್ ರಂಗ ಮಂದಿರ, ದಲಾಲಿ ಬಜಾರ್, ಚನ್ನಳ್ಳಿ ಕ್ರಾಸ್, ಚಿಕ್ಕಯ್ಯಪ್ಪ ದೇವಸ್ಥಾನದ ಬಳಿ ಬಹಿರಂಗ ಪ್ರಚಾರ ಸಭೆ ನಡೆಸಿ ಅಭ್ಯರ್ಥಿಗಳ ಪರ ತಂಗಡಗಿ ಮತಯಾಚನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts