More

    ಮಾತೃ ಭಾಷೆಯಿಂದ ನಾಗರಿಕತೆ ಉಳಿವು

    ಕಾರಟಗಿ: ಮಾತೃಭಾಷೆ ಉಳಿದರೆ ಮಾತ್ರ ನಾಗರಿಕತೆ ಉಳಿಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಹೇಳಿದರು.

    ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಬೈಕ್ ರ‌್ಯಾಲಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಭಾಷೆಗೆ ಯಾವುದೇ ಮತ-ಬೇಧವಿಲ್ಲ. ಮಾತೃಭಾಷೆ ಉಳಿದರೆ ಭವಿಷ್ಯದ ನಾಗರಿಕತೆ ಉಳಿಯಲಿದೆ. ಒಬ್ಬ ವ್ಯಕ್ತಿ ಪರಿಪೂರ್ಣತೆ ಪಡೆಯಬೇಕಾದರೆ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಎಲ್ಲರೂ ಒಗ್ಗೂಡಿ ಭಾಷೆ ಉಳಿವಿಗೆ ಶ್ರಮಿಸಬೇಕು. ಅವರಿವರೆನ್ನದೇ ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸೋಣ ಎಂದು ಮನವಿ ಮಾಡಿದರು.

    ಕೆಪಿಎಸ್ ಶಾಲೆ ಆವರಣದಿಂದ ಆರಂಭಗೊಂಡ ಬೈಕ್‌ರ‌್ಯಾಲಿ ಸಾಲೋಣಿ ಕ್ರಾಸ್, ಶರಣಬಸವೇಶ್ವರ ದೇವಸ್ಥಾನ, ವಿಶೇಷ ಎಪಿಎಂಸಿ, ಆರ್.ಜಿ.ಮುಖ್ಯ ರಸ್ತೆ, ಕನಕದಾಸ ವೃತ್ತ, ಪುರಸಭೆ, ಜೆ.ಪಿ. ನಗರ, ಹೆಮರಡ್ಡಿ ಮಲ್ಲಮ್ಮ ವೃತ್ತ, ದಲಾಲಿ ಬಜಾರ್, ರಾಜೀವ್ ಗಾಂಧಿನಗರ, ರಾಮನಗರ ಇತರೆಡೆ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts