More

    ದಣಿವರಿಯದ ದುಡಿಮೆಗಾರ ಉಮೇಶ ಕತ್ತಿ

    ಕಾರಟಗಿ: ಸತತ 37ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ದಣಿವರಿಯದ ದುಡಿಮೆಗಾರನೆಂದೇ ಖ್ಯಾತಿ ಪಡೆದವರು ಉಮೇಶ ಕತ್ತಿ. ಅವರ ಅಗಲಿಕೆಯಿಂದ ಬಿಜೆಪಿ ಒಬ್ಬ ಮುತ್ಸದ್ದಿ ನಾಯಕನನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಸ್ಕಿ ಹೇಳಿದರು. ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ನಿಧನ ಹಿನ್ನೆಲೆ ಬುಧವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

    ಉಮೇಶ ಕತ್ತಿಯವರು 25ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿದ್ದರು. ವಿಧಾನಸಭೆ ಚುನಾವಣೆಗಳಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿದ ಬೆರಳೆಣಿಕೆಯಷ್ಟು ನಾಯಕರಲ್ಲಿ ಇವರು ಒಬ್ಬರು. ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. ಬಳಿಕ ತೋಟಗಾರಿಕೆ ಮತ್ತು ಬಂದೀಖಾನೆ, ಲೋಕೋಪಯೋಗಿ, ಅರಣ್ಯ ಮತ್ತು ಆಹಾರ ಸೇರಿ ಕೃಷಿ ಸಚಿವರಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಕೀರ್ತಿ ಕತ್ತಿಯವರಿಗೆ ಸಲ್ಲುತ್ತದೆ. ನೇರ ನುಡಿ ಮತ್ತು ನಿಷ್ಠೂರ ನಡೆಯಿಂದ ಹೆಸರುವಾಸಿಯಾಗಿದ್ದರು. ಅಭಿವೃದ್ಧಿ ವಿಷಯವಾಗಿ ಉತ್ತರ ಕರ್ನಾಟಕಕ್ಕೆ ಅತೀವ ಅನ್ಯಾಯವಾಗುತ್ತದೆ ಎನ್ನವ ಕೂಗು ಅವರದಾಗಿತ್ತು. ಅವರ ರಾಜಕೀಯ ಜೀವನ ನಮಗೆ ಮಾದರಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts