More

    ಪ್ರತಿಯೊಬ್ಬರ ಆರೋಗದ ಬಗ್ಗೆ ಇರಲಿ ಕಾಳಜಿ

    ಕಾರಟಗಿ: ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಶ್ರಮಿಸೋಣ ಎಂದು ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ಹೇಳಿದರು. ತಾಲೂಕಿನ ಮರ್ಲಾನಹಳ್ಳಿ ಗ್ರಾಪಂ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಜನರ ಸುರಕ್ಷತೆ ಸಲುವಾಗಿ ಸೋಂಕು ರಹಿತ ರೋಗಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಅವುಗಳ ನಿವಾರಣೆಗೆ ಸರ್ಕಾರ ಆರೋಗ್ಯ ಅಮೃತ ಅಭಿಯಾನ ಆರಂಭಿಸಿದೆ ಎಂದರು.

    ಮಗುವಿನಿಂದ ವಯೋವೃದ್ಧರವರೆಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುವುದು. ಗ್ರಾಪಂಗೆ ಒಂದು ಕಿಟ್ ನೀಡಲಾಗುತ್ತಿದ್ದು ಇದರಲ್ಲಿ ಆರೋಗ್ಯ ತಪಾಸಣೆಗೆ ಅಗತ್ಯ ಉಪಕರಣಗಳು, ಉಪಭೋಗ್ಯ ವಸ್ತುಗಳು ಮತ್ತು ಬ್ಯಾಗ್ ನೀಡಲಾಗುತ್ತದೆ.

    ತರಬೇತಿ ಪಡೆದ ಸಿಬ್ಬಂದಿ ಜನಸಾಂದ್ರತೆ ಇರುವಡೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಬೇಕು. ರಕ್ತದ ಕೊರತೆ, ಅಧಿಕ ರಕ್ತದೊತ್ತಡ, ಮಧುಮೇಹ, ಅಪೌಷ್ಟಿಕತೆ ಕುರಿತು ತಪಾಸಣೆ ನಡೆಸಬೇಕು. ರೋಗಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

    ಗ್ರಾಪಂ ಉಪಾಧ್ಯಕ್ಷೆ ಯಲ್ಲಮ್ಮ ಬೆಳಗಲಿ, ಸದಸ್ಯರಾದ ಜಾವೀದ್, ಹನುಮಂತಪ್ಪ, ಶಾಂತಮ್ಮ, ಹನುಮಂತ, ಪಿಡಿಒ ಸಲ್ಮಾ ಬೇಗಂ, ಆರೋಗ್ಯ ಅಮೃತ ಅಭಿಯಾನದ ತಾಲೂಕು ಸಂಯೋಜಕ ನೀರುಪಾದಿ ಅರಳಿಗನೂರು, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts