More

    ಬಾಲ್ಯದಲ್ಲೇ ಓದುವ ಅಭಿರುಚಿ ಬೆಳೆಸಿಕೊಳ್ಳಿ

    ಕಾರಟಗಿ: ಬಾಲ್ಯದಿಂದಲೇ ಮಕ್ಕಳು ಓದುವ ಅಭಿರುಚಿ ಬೆಳೆಸಿಕೊಳ್ಳಲು ನಿರಂತರ ಪ್ರಯತ್ನಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ್ ಹೇಳಿದರು.

    ತಾಲೂಕಿನ ಮುಸ್ಟೂರು-ಅಂಜೂರಿಕ್ಯಾಂಪ್‌ನ ಎಚ್.ಜಿ. ರಾಮುಲು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಗ್ಯೋಥೇ ಇನ್ಸ್‌ಟ್ಯೂಟ್ ಹಾಗೂ ನವ ಕರ್ನಾಟಕ ಪ್ರಕಾಶನ ಸಹಯೋಗದಲ್ಲಿ ಪ್ರಕಟಿಸಿದ ‘ಕಿಂಡರ್ ಕಥಾ ಮಾಲಿಕೆ’ಯ 18 ವಿವಿಧ ಕಥಾ ಪುಸ್ತಕಗಳನ್ನು ಗುರುವಾರ ಉಚಿತವಾಗಿ ವಿತರಿಸಿ ಮಾತನಾಡಿದರು.

    ಮಕ್ಕಳು ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ಹಿಡಿದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸ್ಥಿರತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಕತೆ, ಕಾವ್ಯ, ಕಾದಂಬರಿ, ನಾಟಕ, ಜನಪದ ಸಾಹಿತ್ಯ ಇತರ ಆಸಕ್ತಿದಾಯಕ ಪುಸ್ತಗಳನ್ನು ಓದಲು ರೂಢಿಸಿಕೊಳ್ಳಬೇಕು. ಅನಗತ್ಯ ವಸ್ತುಗಳ ಖರೀದಿಸಿ ಹಣ ವ್ಯಯಿಸುವ ಬದಲು ಮನೆಗೆ ಪುಸ್ತಕ ಕೊಂಡೊಯ್ಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಮಾಲೀಕೆಯಲ್ಲಿ ಲಕ್ಷ್ಮೀಕ್ಯಾಂಪ್-ಕುಂಟೋಜಿ ಶಾಲೆಯ ಮುಖ್ಯಶಿಕ್ಷಕ ಸೋಮು ಕುದರಿಹಾಳ ಅವರ ‘ಮಳೆ ಎಲ್ಲಿ ಸಿಗುತ್ತೆ’ ಎನ್ನುವ ಸಂಕಲವಿದ್ದು ಅದರಲ್ಲಿ ಸಾಮಾಜಿಕ ಮೌಲ್ಯವುಳ್ಳ ಕತೆಗಳಿವೆ. ನಿರಂತರ ಅಧ್ಯಯನ ಮನುಷ್ಯನ ಬೌದ್ಧಿಕ ಬೆಳವಣಿಗೆ ಜತೆಗೆ ಸಮಚಿತ್ತ ಸಾಧನೆಗೆ ದಾರಿಯಾಗಲಿದೆ. ವಿವಿಧ ಸಂಘ-ಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಸಾಹಿತ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಮತ್ತಿತರ ಪರಿಕರಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts