More

    ಶ್ರೀರಾಮ ಮಂದಿರ ನಿರ್ಮಾಣದ ಕನಸು ನನಸಾಯಿತೆಂದ ಶಾಸಕ ಬಸವರಾಜ ದಢೇಸುಗೂರು

    ಕಾರಟಗಿ: ಅಯೋಧ್ಯದಲ್ಲಿ ಶ್ರೀರಾಮಚಂದ್ರ ಮಂದಿರ ನಿರ್ಮಾಣದ ಕನಸು ಬಹು ವರ್ಷಗಳ ಬಳಿಕ ನನಸಾಗಲಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದಲ್ಲಿ ಶ್ರೀರಾಮಚಂದ್ರ ಮಂದಿರ ನಿರ್ಮಾಣ ಸಂಬಂಧ ಮಂಗಳವಾರ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಾಗುತ್ತಿದೆ. ಫೆ. 5ರವರೆಗೆ ಈ ಕಾರ್ಯ ನಡೆಯುತ್ತಿದೆ. ಸರ್ವರೂ ಸತ್ಕಾರ್ಯಕ್ಕೆ ಮನಪೂರ್ವಕ ದೇಣಿಗೆ ನೀಡಬೇಕು ಎಂದರು.

    ಶಾಸಕ ಆಚಾರ್ ಹಾಲಪ್ಪ ಮಾತನಾಡಿ, ಹನಿ-ಹನಿ ಕೂಡಿದರೆ ಹಳ್ಳ. ಈ ಕಾರಣದಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಕೈಲಾದಷ್ಟು ಧನ ಸಹಾಯ ಮಾಡುವ ಮೂಲಕ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು. ಜಾತಿ, ಮತ, ಪಂಥಗಳಿಲ್ಲದೆ ಎಲ್ಲರಿಂದಲೂ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ದೇವಾಲಯ ನಿರ್ಮಾಣಕ್ಕೆ ಮುಂದಡಿ ಎನ್ನುವಂತೆ ಸರ್ವ ಸಿದ್ಧತೆ ನಡೆಯುತ್ತಿದೆ ಎಂದರು.

    ಅಭಿಯಾನದ ಉತ್ತರ ಪ್ರಾಂತದ ಸಹ ಕಾರ್ಯವಾಹಕ ಪ್ರಸನ್ನ ಜೀ, ಸಂಘ ಸಂಚಾಲಕ ಬಸವರಾಜ ಡಂಬಳ, ಪ್ರಾಂತ ವ್ಯವಸ್ಥಾಪಕ ನರೇಶ ಜೀ ಸೇರಿ ಬಿಜೆಪಿ ದಪದಾಧಿಕಾರಿಗಳಿದ್ದರು.

    ದಾನಿಗಳಿಂದ ನಿಧಿ ಸಂಗ್ರಹ : ರಾಮ ಮಂದಿರ ನಿರ್ಮಾಣ ಸಂಬಂಧ ಪಟ್ಟಣದಲ್ಲಿ ನಿಧಿ ಸಂಗ್ರಹ ಕಾರ್ಯದಲ್ಲಿ ಲಕ್ಷ್ಮಿ ವಿನಾಯಕ ರೈಸ್ ಮಿಲ್ ಮಾಲೀಕ ಕೆ. ಸತ್ಯನಾರಾಯಣ 201000, ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಮಾಲೀಕ ಗೋಪಿಕೃಷ್ಣ 101000, ಎಂ. ಕೆ. ರೈಸ್ ಮಿಲ್ ಮಾಲೀಕ ಮೊನ್ನೆ ಕೃಷ್ಣಮೂರ್ತಿ 101000, ಪ್ರಹ್ಲಾದ್ ಶೆಟ್ಟಿ 51000, ಪಿ. ಗೋವಿಂದರಾಜ್ 51000, ಹಾಗೂ ಮೋಹನ ರಾವ್ 25,000, ಯಂಕರಡ್ಡಿ 11,000, ವೀರೇಶಪ್ಪ ಚಿನಿವಾಲ 11,000, ಸಾಕ್ಷಿ ರೈಸ್ ಮಿಲ್ 11000, ಶ್ರೀರಾಮ್ ಟ್ರೇಡರ್ಸ್ 11,000, ಶಿವಶಕ್ತಿ ರೈಸ್ ಮಿಲ್ 9000, ಉಮೇಶ ಭಂಗಿ 11000 ದೇಣಿಗೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts